ನನ್ನ ಅನುವಾದ

ಅನುವಾದಿಸಿಕೊಳ್ಳುತ್ತಿದ್ದೇನೆ,
ಗೊತ್ತಿರದ ಪದಗಳನ್ನು
ಹುಡುಕಿ
ಕೋಶಗಳಲ್ಲಿ,
ಕಾಲವನ್ನು ಆಪೋಶನ
ತೆಗೆದುಕೊಂಡು,
ನೆರಳಿಗೊಮ್ಮೆ
ಬಿಸಿಲಿಗೊಮ್ಮೆ ಮುಖವೊಡ್ಡಿ
ಕೊಡವಿದರೂ ಪೆನ್ನು
ಬರೆಯುತ್ತಿಲ್ಲ,
ಬಹುಃಷ
ಶಾಯಿ ಇಲ್ಲವೇನೋ.
ಅರ್ಥ ಸಿಗದವೊಂದಿಷ್ಟನ್ನು
ಯಥಾವತ್ ಹಾಗೆ
ಇಳಿಸಿದ್ದೇನೆ
ಜೋಪಾನವಾಗಿ ಮಗುವಿನಂತೆ
ಅಳುತ್ತಿದ್ದರೂ ಹಾಲುಣಿಸುವಂತಿಲ್ಲ.
ಬಾಯಿ ಹೊರಳುತ್ತಿಲ್ಲ
ಜೋರಾಗಿ ಓದಿಕೊಳ್ಳಲು
ತೊದಲುತ್ತಿದ್ದೇನೆ,
ಕನಸುಗಳಾದಿಯಾಗಿ
ಅನುವಾದದ ಕೊನೆಯಲ್ಲಿ
ನಾನು ನಾನಾಗಿಯೇ ಇದ್ದೇನೆ,
ಎಲ್ಲರಿಗೂ ಅರ್ಥವಾದಗಿದ್ದರೂ
ಸದ್ಯ ನನಗೆ ನಾನು
ಓದುವಂತಾಗಿದ್ದೇನೆ
ತುಂಬಾ ಇಷ್ಟ ಆಯ್ತು
ReplyDeleteನೀವು ನೀವಾದ ಪರಿ