ಬದುಕು ಸುಡುಗಾಡಲ್ಲದೆ ಮತ್ತೇನು!

ಸುಡುಗಾಡು,
ಮಣ್ಣ ಬದಲಿಗೆ
ಬಣ್ಣ ಹೊದ್ದು
ಸಿಕ್ಕದ್ದನ್ನೆಲ್ಲಾ ಮೆದ್ದು
ಆಕೃತಿಗಳಾಗಿ
ಪರದೆಯ ಮೇಲೆ
ನಿಲ್ಲುತ್ತೇವೆ,
ಆಸೆ ಹುಳುಗಳಿಂದ
ಕೊಳೆಯುತ್ತೇವೆ,
ಎಲ್ಲೊ ಒಂದೆಡೆ
ಮೊಳೆಕೆಯೊಡೆಯುತ್ತೇವೆ,
ಮೂಕವಿಸ್ಮಿತ ಕನಸುಗಳ
ಮಡಿಚಿಟ್ಟು
ಮತ್ತದೇ ಸುಡುಗಾಡು ಬದುಕು,
ಅಮೂರ್ತ ಚಿತ್ರ
ಕಂಡಾಗಲೂ,
ನೋವುಂಡ ದನಿ ಕಿವಿಗೆ
ಬಿದ್ದಾಗಲೂ
ತಿರುಗೀ ನೋಡದೇ
ಬದುಕುತ್ತಿರುವ ಹೆಣಗಳು ನಾವು
ಹಾಗಾದರೆ!
ಈ ಬದುಕು
ಸುಡುಗಾಡಲ್ಲದೇ ಮತ್ತೇನು?
ಹೊದ್ದಿರುವ ಬಣ್ಣ ಮಣ್ಣಲ್ಲದೇ
ಮತ್ತೇನು?
-ಪ್ರವರ
ಬದುಕು ಒಂಥರಾ
ReplyDeleteಸುಡುಗಾಡು,
ಮಣ್ಣ ಬದಲಿಗೆ
ಬಣ್ಣ ಹೊದ್ದು
ಸಿಕ್ಕದ್ದನ್ನೆಲ್ಲಾ ಮೆದ್ದು
ಆಕೃತಿಗಳಾಗಿ
ಪರದೆಯ ಮೇಲೆ
ನಿಲ್ಲುತ್ತೇವೆ,
ಪ್ರವರ ಅದ್ಭುತ ಸಾಲುಗಳು..........