ಆಂತರ್ಯದೊಳಗೊಂದು ಹುಡುಕಾಟ

ಸುಮಾರು ದಿನಗಳಿಂದ
ಹುಡುಕುತಿದ್ದೇನೆ,
ಸಿಕ್ಕರೂ ಸಿಗಬಹುದೆಂಬ
ಆಸೆಗೆ,
ಧೂಳು ಹೊತ್ತಿದ್ದ
ಪುಸ್ತಕಗಳನೆಲ್ಲಾ ಕೆದಕಿ.
ಆತ ನನ್ನ ತಲೆಯನ್ನೇಕೆ
ಹೊಕ್ಕಿದ್ದಾನೆ,
ಸೊಳ್ಳೆ ಕಡಿತಕ್ಕೆ
ಪರಪರನೆ ಕೆರೆದುಕೊಂಡಂತೆ,
ಬಾಯಿಗೆ ಕೈ ಹಿಡಿದು,
ಘಾಟಕ್ಕೆ ಕೆಮ್ಮಿದಂತೆ,
ನನ್ನ ನೆರಳನ್ನೂ ನಾನು
ಗಮನಿಸಿರಲಿಲ್ಲ ಇಷ್ಟು
ಮತ್ತೆ ಕೋಪ
ಯಾರ ಮೇಲೆಂದು
ಗೊತ್ತಿಲ್ಲ.
ಇದ್ದಕ್ಕಿದ್ದಂತೆ ಶಾಂತತೆ
ಕತ್ತಲು ಕವಿದಂತೆ
ಈಗ ಕೂತಿದ್ದೇನೆ ಕತ್ತಲಲ್ಲಿ
ಯಾರನ್ನೋ ಆಲಿಸುತ್ತಾ
ಕಣ್ಣು ಮುಚ್ಚಿ,
ಮೇಜಿನ ಮೇಲೆ ಮೆಲ್ಲಗೆ ಉರಿಯುತಿದ್ದ
ಮೊಂಬತ್ತಿಯಿಂದ ದೂರ ಕುಳಿತು
ಅಸ್ಪುರ್ಶ್ಯನಂತೆ.
ಕಣ್ಣು ಬಿಡಲು ಎಲ್ಲವೂ
ಮೊದಲಿದ್ದ ಹಾಗೇ ಇವೆ!!!!
ವಾಸ್ತವಕ್ಕೆ ಕಣ್ಣು ಕಟ್ಟಿ
ಕೂಡ್ರಿಸಿದಂತೆ
ಹಚ್ಚಿಟ್ಟ ಮೊಂಬತ್ತಿ
ನಾನು ಹುಡುಕುತಿದ್ದ
ಬೆತ್ತಲೇ ಬುದ್ಧ
-ಪ್ರವರ
Comments
Post a Comment
ಅನ್ಸಿದ್ ಬರೀರಿ