ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, November 11, 2012

ನೀನು ಪಿಸುಗುಟ್ಟಿದ್ದು ಕೊನೆಗೂ ಕೇಳಿಸಲೇ ಇಲ್ಲನೀರು ಸಣ್ಣಗೆ ಸದ್ದು
ಮಾಡುತ್ತಾ
ಹರಿಯುತಿತ್ತು,

ನಿನ್ನ ಅಳುವಿನಂತೆ
ಹನಿಗಳೂ ಸಹ
ಒದ್ದೆಗೊಂಡಿದ್ದ ಕಣ್ ರೆಪ್ಪೆಗಳೂ ಸಹ

ಬೆಳಕ ಚದುರಿಸುತ್ತಾ
ಸಾಗಿದ್ದ ಅಲೆಗಳಲ್ಲಿ
ನಿನ್ನ ಮನಸ್ಸು
ಬಿಡದೇ ಪ್ರತಿಫಲಿಸುತಿತ್ತು

ಅದು ಏಕಾಂತವೋ
ಅಂತರ್ ಧ್ಯಾನದ
ಮೌನವೋ
ನೋಡುತ್ತಾ ನಿಂತವ
ನಾನು ಮತ್ತು
ಕಿತ್ತೆಸಿದಿದ್ದ ನಿನ್ನ ಕಾಲ್ ಗೆಜ್ಜೆಗಳು

ನೀ ಪಿಸುಗುಟ್ಟದ್ದು
ಕೊನೆಗೂ ಕೇಳಿಸಲೇ ಇಲ್ಲ

ಮುಲುಕಾಟ
ನನ್ನದೋ
ಅತ್ತು ಅತ್ತೂ ಬತ್ತಿದ್ದ
ನಿನ್ನ ಕಣ್ಣಿನದೋ
ಒಂಚೂರು ತಿಳಿಯದೇ ಹೋದ್ದಕ್ಕೆ
ನಮ್ಮೊಲುಮೆಗೆ ಒಂದು
ಹಿಡಿ ಮಣ್ಣು ಬೀಳಲಿ

ನೀನಿರುವವರೆಗೆ ಕವಿತೆ
ಆಂತರ್ಯದೊಳಗೆ
ಮಗುವಂತೆ ಬೆಚ್ಚಗಿತ್ತು

ಈಗ ಬಿಕ್ಕಿ ಬಿಕ್ಕಿ
ಅಳುತ್ತಿದೆ
-ಪ್ರವರ

No comments:

Post a Comment

ಅನ್ಸಿದ್ ಬರೀರಿ