ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, October 8, 2012

ತವಕ

ಸಾಳೆಯ ಪುಟದಲ್ಲಿ
ನನ್ನ ಹೆಸರಿಲ್ಲ,

ಉಸಿರ ಹೊತ್ತು
ಕಾಯುತಿದ್ದೇನೆ
ಬೋಳು ಮರದಂತೆ
ಬೇರ ಮಣ್ಣಿನಾಳಕ್ಕೆ ಬಿಟ್ಟು
ಒಳಗೆಲ್ಲೊ ಅಡಗಿದ್ದ
ನೀರ ಹುಕುಕಲೆಂದು

ಬೆಳಕಿನಡಿ ಕತ್ತಲೆಯ
ಮೂಸುತಿದ್ದ
ಕನಸುಗಳ ಹೊತ್ತಿದ್ದೇನೆ
ಬೆನ್ನು ಬಾಗಿಸಿಕೊಂಡು

ಕೆಂಪು ಹುಡಿಯೊಳಗೆ
ಬೀಜಕ್ಕೆ ಸಸಿಯಾಗೊ
ತವಕವಿದೆ
ಎದೆಯೊಳಗೆ
ಹಸಿಗವಿತೆಯಿದೆ
ಆ ಹಸಿಗವಿತೆ ನಾನು
ನಾಳೆಯ ಪುಟದಲ್ಲಿ
ನನ್ನ ಹೆಸರಿಲ್ಲ
-ಪ್ರವರ

No comments:

Post a Comment

ಅನ್ಸಿದ್ ಬರೀರಿ