ಬಂಡಾಯ ಕಾವ್ಯ

ಬಿಸಿಲ ನುಂಗುವ
ಬಯಲು,
ಚದುರಿದ್ದ ಮೋಡಗಳಿಗೆ
ಕಾವಿಡುತಿದ್ದ ಬಿಸಿಯು,
ಅಲ್ಲೆಲ್ಲೊ ಮರಳು
ಸರಿಯುತಲಿದ್ದ ಸದ್ದು,
ಮೊಬ್ಬು ಚಿತ್ರಗಳ
ಸಾಲು,
ಗಂಟಲು ಹರಿದು
ಕೂಗಿದರೂ ಕೇಳಲೊಲ್ಲದ
ಕಿವಿಯು,
ಸುರಿದಾವಿಯಾದ
ಮೈಯ ಬೆವರು,
ಎಲ್ಲವೂ ನಿತ್ರಾಣ,
ಆದರೂ ಅಲ್ಲೊಂದು
ಗಹನವಾದ ರೇಖೆ,
ರೂಪಾಂತರವಾಗೆ
ಕಲ್ಲಿನೆದೆಯಂಥ
ಬಂಡಾಯ ಕಾವ್ಯವಾಯ್ತು.

Comments

  1. ಬದುಕು, ಬದುಕ ಬವಣೆಗಳು, ಅವುಗಳೊಂದಿಗಿನ ಹೋರಾಟವೆ ಬಂಡಾಯ ಕಾವ್ಯ
    ಚೆನ್ನಾಗಿದೆ ಪ್ರವರ

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ