ಬೆತ್ತಲಾದ ಕಪ್ಪು ಸಂಜೆ



ನೀರವತೆಯ ಹೊಸ್ತಿಲಲ್ಲಿ
ನಿಂತಿದ್ದ ಸಂಜೆಯದು,
ಮೌನಗಳ ಸಂತೆ,
ಅಲ್ಲೆಲ್ಲೋ
ಚೂರು ರಂಗು
ಸೂಜಿ ಮೊನೆಯಿಂದ
ಕೊರೆದಂತೆ.

ಎಲ್ಲವೂ
ಎಲ್ಲರೂ
ಅದರೊಳಗೆ ಕರಗಿ
ಲೀನವಾದಂತೆ ಭಾಸ,
ಜೀಗುಡುವ ಸದ್ದು.
ಅಲ್ಲಿ,
ಬೆತ್ತಲಾದದ್ದು
ಎಲ್ಲವನ್ನೂ ಕಳಚಿದ್ದ
ಕಪ್ಪು ಸಂಜೆ

ಹಾತೊರೆತ ಇದ್ದದ್ದು
ಕರಗುತಿದ್ದ ಬಣ್ಣದಲ್ಲಲ್ಲ,
ಕಡುಗಪ್ಪು ಕತ್ತಲಲ್ಲಿ,!!
ನಾಳೆಗಳ
ಹೆಕ್ಕಿ ತೆಗೆಯುತ್ತಿದೆ
ಉಗುಳ ನುಂಗಿಕೊಂಡು.
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ