ಬರೆಯದೇ ಬಿಟ್ಟ ಎರಡು ಕವಿತೆಗಳು

ಲಾಟೀನಿನ ಬೆಳಕಲ್ಲಿ ಬರೆದು
ಅರ್ಧಕ್ಕೆ ಬಿಟ್ಟ
ಇನ್ನೆರಡು ಕವಿತೆಗಳಿವೆ
ಬಾರ ಕಮಾನಿನ ಹಾಗೆ,

ನಿದ್ದೆಯಿಂದೆದ್ದು ಬರೆದಿದ್ದೆ
ಬರಗೆಟ್ಟವನಂತೆ
ಡಿಕಾಕ್ಷನ್ ನೇ ಗಟ-ಗಟ ಕುಡಿದು,
ತಣ್ಣಗೆ ಗಾಳಿ ಬೀಸುತಿದ್ದ
ಕಿಡಕಿಯ ಪಕ್ಕ ಕುಳಿತು,

ಬಸುರಿ ಇಂಕು ಪೆನ್ನಿಗೆ
ಪ್ರಸವ ಬಿಳಿಯ ಹಾಳೆಯ ಮೇಲೆ
ಎಷ್ಟೋ ಹೊತ್ತು ತಿಳುಕಾಡಿದಕ್ಕೆ
ಅಳುತ್ತಾ ಹೊರಬಂದವು
ಕಪ್ಪು ಪದಗಳು,
ಲಾಟೀನಿನ ಅಲ್ಪ ಬೆಳಕಿಗೆ
ಎಲ್ಲವೂ ಮೊಬ್ಬು ಮೊಬ್ಬು,
ಸೊಳ್ಳೆಗಳ ಕಾಟ ಬೇರೆ

ಅಲ್ಲೆಲ್ಲೋ ಗೂರಲು ಹತ್ತಿ
ಕೆಮ್ಮುತ್ತಿದ್ದವನ ಸದ್ದು,
ಹಾಗೇ ಕತ್ತಲ ಬಿಕ್ಕಳಿಕೆ,
ಯಾರೋ ನೆನೆದಂತೆ
ದಿಂಬುಗಳ ಅಪ್ಪಿಕೊಂಡು.

ನಿದ್ದೆಯ ಝೋಂಪಿಗೆ
ತೂಕಡಿಸುತ್ತ
ಮಲಗಿದ್ದೇನೆ ಲಾಟೀನ ಬೆಳಕಲ್ಲೇ,
ಬರೆದು ಅರ್ಧಕ್ಕೆ ಬಿಟ್ಟ
ಇನ್ನೆರಡು ಕವಿತೆಗಳಿವೆ
ಬಾರ ಕಮಾನಿನ ಹಾಗೆ
-ಪ್ರವರ

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ