ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Friday, October 19, 2012

ನೀನಿಲ್ಲದೆ ನೀರವ ಮೌನ

ಹೇ ಹುಡುಗಿ
ನನ್ನ ಬಳಿ ನೀ ಬಿಟ್ಟು ಹೋದ
ನೆನಪುಗಳಿಗೀಗ
ರೆಕ್ಕೆ ಬಂದಿವೆ
ಹಾರಲು ಹಾತೊರೆಯುತ್ತಿವೆ,
ಇದುವರೆಗೂ ಕೂತು
ಕಣ್ಣು ಬಿಡುತಿದ್ದವು
ಗೂಬೆಗಳ ಹಾಗೆ,

ಸತ್ತ ಕನಸುಗಳಿಹ
ನನ್ನೆದೆ ಸುಡುಗಾಡಲ್ಲದೆ
ಮತ್ತೇನು,
ಒಡೆದ ಮಡಿಕೆಗಳ
ಪುರಾವೆ ಬೇರೆ!!!
ರಾತ್ರಿಗಳ ಕಾಡುತ್ತಿವೆ
ವಿರಹವೆಂಬ
ಪ್ರೇತಗಳು.....

ತುಂಟ ಮಾತುಗಳು
ಪಿಸುಗುಡುತಿದ್ದ ಕಿವಿಯಲ್ಲಿ
ತುಸು ಮೌನ
ಏನೋ ನಿರಾಳ,
ಮತ್ತೆ
ನೀನಿಲ್ಲದ ನನ್ನ
ನೆರಳಿಗೆ ಸೂತಕದ
ಛಾಯೆ
-ಪ್ರವರ
1 comment:

  1. ನೀನಿಲ್ಲದ ನನ್ನ
    ನೆರಳಿಗೆ ಸೂತಕದ
    ಛಾಯೆ
    ...............ಈ ಸಾಲು ಓದಿದಾಗ ಮನಸಿಗೇಕೋ ತುಂಬಾ ವೇದನೆಯಾಗುತ್ತದೆ.ಅದೆಂತ ಜೀವನ ಪ್ರೀತಿ ಇದೆ ಈ ಭಾವದಲ್ಲಿ.ಆ ನಿರ್ಮಲ ನಿರ್ವಾಜ್ಯ ಪ್ರೀತಿಗೆ ಸೂತಕ ಬಾರದಿರಲೆಂದು ಮನಸು ಬಯಸುತ್ತದೆ.ಒಂದು ಸುಂದರ ಕವಿತೆಯೋದಿದ ಆನಂದ ನಮ್ಮದು.ನಿಮ್ಮಂತ ಕವಿ ಹೃದಯರನ್ನು ಪಡೆದ ನಾವುಗಳು ಧನ್ಯ.ಹೀಗೆ ನೂರಾರು ಕವಿತೆಗಳು ನಿಮ್ಮ ಲೇಖನಿಯಿಂದ ಅರಳಲಿ.

    ReplyDelete

ಅನ್ಸಿದ್ ಬರೀರಿ