ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Friday, October 5, 2012

ಹಸಿದವರ ಬಿಕ್ಕಳಿಕೆ


ಕಪ್ಪು ಜನ ಬಸಿದಿದ್ದ
ಕೆಂಪು ರಕುತದ ಬಣ್ಣ
ಧರ್ಪದರಮನೆ ಗೋಡೆ
ಹೂವಾಗಿದೆ,

ಬಡಕಲೆದೆ ಕೂಸು
ಹಸಿವಿನಿಂದಳುವಾಗ
ನಗುತ ಕೂತವರಿಗೆಲ್ಲ
ಮಜವಾಗಿದೆ,

ಕಲ್ಲೊತ್ತವರ ಬೆನ್ನು
ಆಗಸಕೆ ಮುಖ ಮಾಡಿ
ಸೂರ್ಯ ಕೆಂಡಕೆ ಸುಡುವ
ತೊಗಲಾಗಿದೆ

ಬೆನ್ನಿಗಂಟಿದ ಹೊಟ್ಟೆ
ತೂಗಲಾರದ ಹಸಿವು
ಅಂಗುಲದ ತುತ್ತಿಗೆ
ಕೈ ಚಾಚಿದೆ
- ಪ್ರವರ

No comments:

Post a Comment

ಅನ್ಸಿದ್ ಬರೀರಿ