ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Thursday, September 27, 2012

ದಾರಿ ಮಾಡಿಕೊಡು ಗೋರಿ


ಹೇ ಗೋರಿಯೆ!
ನಾನು ನಿನ್ನೊಡಲ
ಸೇರುವವನಿದ್ದೇನೆ
ಕೊಂಚ ದಾರಿ ಮಾಡಿಕೊಡು.

ನಾ ಹೊದ್ದ ಮಣ್ಣಿನ
ಮೇಲೆ ಬೆಳೆಯಲಿ
ಒಂದಿಷ್ಟು ಹೂವುಗಳು,

ಸ್ವಲ್ಪ ತಡಮಾಡಿದರೂ
ಯಾರಾದರೊಬ್ಬರು
ಬೆಂಕಿ ಇಡುತ್ತಾರೆ
ನನಗೆ ಸುಟ್ಟು ಬೂದಿಯಾಗಲು\
ಇಷ್ಟವಿಲ್ಲ,
ಎದೆಗೂಡಿನಲ್ಲಿಹ ಕನಸುಗಳ
ಚೀರಾಟ ಕೇಳುವಷ್ಟು ಶಕ್ತನಲ್ಲ!

ಮಣ್ಣನಪ್ಪಿ ಮಲಗಬೇಕಿದೆ ನಾನು.
ಆಸೆಗಳಿಗೆ ಜೀವ ಬಂದು
ಚಿಗುರೊಡೆದಾವು,
ಕಿಕ್ಕಿರಿದು ತುಂಬಿರುವ
ಕನಸುಗಳಿಗೆ ರೆಕ್ಕೆ ಬಂದಾವು
ಮತ್ತೆ ಹಾರಿಯಾವು

ದಾರಿ ಮಾಡಿಕೊಡು ಗೋರಿಯೇ
ದಾರಿ ಮಾಡಿಕೊಡು
ನಾನು ನಿನ್ನೊಡಲ
ಸೇರುವವನಿದ್ದೇನೆ
-ಪ್ರವರ

photo by: surya avi


No comments:

Post a Comment

ಅನ್ಸಿದ್ ಬರೀರಿ