ಹಳತೆಂಬ ಹೊಸ ನೋಟ
ಅರೆ ಧೂಳು ಅಡರಿದೆಯಲ್ಲ
ಹತ್ತಿ ಬಟ್ಟೆಯಿಂದ ಮೆದುವಾಗಿ
ಒರೆಸಬೇಕಾಗಿದೆ,
ಗೋಡೆಯ ಪಕ್ಕದಲ್ಲೇ ತುಂಬಾ ವರ್ಷಗಳಿಂದ
ಅಂಟಿಕೊಂಡಿದೆ ನಮ್ಮಜ್ಜಿಯಂತೆ,
ಓ, ಆಜ್ಜಿ ಈಗ ಗೋಡೆಯ ಮೇಲೆ
ನಗುತ್ತಾ ನೇತಾಡುತ್ತಿದ್ದಾರೆ
ಹಾರ ಹಾಕಿಕೊಂಡು,
ಹಳೆ ಮಣ್ಣಿನ ಮಾಳಿಗೆಯ ಹೊತ್ತಿದ್ದ
ಸಾಗುವಾನಿ ಕಟ್ಟಿಗೆಯಿಂದ
ಮಾಡಿದ್ದ ಕಂಬವಿರಬೇಕು,
ಅಮ್ಮ ನನ್ನ ಊಟಕ್ಕೆ ಕರೆದಾಗಲೆಲ್ಲ
ಬೇಡವೆಂದು ಅದನಪ್ಪಿ ಅಳುತಿದ್ದೆ
ಆದರೂ ಅಲುಗಾಡದೇ ನಿಂತಿದೆಯಲ್ಲ
ಅಪ್ಪ ಕೆಲಸಕ್ಕೆ ಸೇರಿದ ಹೊಸತಲ್ಲಿ
ಕೊಂಡಿದ್ದ ಸೈಕಲ್ಲಂತೆ
ಕಡ್ಡಿಗಳೊಂದಿಷ್ಟು ಮುರಿದಿವೆ,
ತುಕ್ಕಿಡಿದ ಅದಕ್ಕೆ ಸೀಟೂ ಇಲ್ಲ,
ನಾ ಚಿಕ್ಕವನಿದ್ದಾಗ
ಅಪ್ಪನ ಮುಂದೆ ಕೂತು
ಸವಾರಿ ಮಾಡುತಿದ್ದೆ,
ಗಾಳಿಗೆ ಅಂಗಿಯುಬ್ಬಿ ಡುಮ್ಮನಾಗುತ್ತಿದ್ದೆ,
ನಾನು ಮಲಗಲೆಂದು
ಜೋಲಿ ಕಟ್ಟುತ್ತಿದ್ದ
ಅಮ್ಮನ ಸೀರೆಗಳೆಲ್ಲಾ
ಕೌದಿಯಾಗಿವೆ, ಚಳಿಗೆ ಬೆಚ್ಚಗಾಗಿಸಲು,
ಅದನ್ನು ಹೊಲಿದಿದ್ದು
ಕೆಳಗೆರೆಯ ಚೌಡಮ್ಮನಂತೆ
ಆಕೆ ಮುಖವಾಗಲೇ ಸುಕ್ಕುಗಟ್ಟಿದೆಯಂತೆ,
ಅರೆ!!! ನಾನೇಕೆ ಭಾವುಕನಾಗುತ್ತಿದ್ದೇನೆ,
ಎಲ್ಲಕ್ಕೂ ವಯಸ್ಸಾಗಲೇ ಬೇಕಲ್ಲವೇ,
ನಿನ್ನೆ ಮೊನ್ನೆಯವರೆಗೆ ಜೋಲಿಯೊಳಗಾಡುತಿದ್ದ
ನನಗೂ ಸಹ......
-ಪ್ರವರ
photo by: surya avi

ಒರೆಸಬೇಕಾಗಿದೆ,
ಗೋಡೆಯ ಪಕ್ಕದಲ್ಲೇ ತುಂಬಾ ವರ್ಷಗಳಿಂದ
ಅಂಟಿಕೊಂಡಿದೆ ನಮ್ಮಜ್ಜಿಯಂತೆ,
ಓ, ಆಜ್ಜಿ ಈಗ ಗೋಡೆಯ ಮೇಲೆ
ನಗುತ್ತಾ ನೇತಾಡುತ್ತಿದ್ದಾರೆ
ಹಾರ ಹಾಕಿಕೊಂಡು,
ಹಳೆ ಮಣ್ಣಿನ ಮಾಳಿಗೆಯ ಹೊತ್ತಿದ್ದ
ಸಾಗುವಾನಿ ಕಟ್ಟಿಗೆಯಿಂದ
ಮಾಡಿದ್ದ ಕಂಬವಿರಬೇಕು,
ಅಮ್ಮ ನನ್ನ ಊಟಕ್ಕೆ ಕರೆದಾಗಲೆಲ್ಲ
ಬೇಡವೆಂದು ಅದನಪ್ಪಿ ಅಳುತಿದ್ದೆ
ಆದರೂ ಅಲುಗಾಡದೇ ನಿಂತಿದೆಯಲ್ಲ
ಅಪ್ಪ ಕೆಲಸಕ್ಕೆ ಸೇರಿದ ಹೊಸತಲ್ಲಿ
ಕೊಂಡಿದ್ದ ಸೈಕಲ್ಲಂತೆ
ಕಡ್ಡಿಗಳೊಂದಿಷ್ಟು ಮುರಿದಿವೆ,
ತುಕ್ಕಿಡಿದ ಅದಕ್ಕೆ ಸೀಟೂ ಇಲ್ಲ,
ನಾ ಚಿಕ್ಕವನಿದ್ದಾಗ
ಅಪ್ಪನ ಮುಂದೆ ಕೂತು
ಸವಾರಿ ಮಾಡುತಿದ್ದೆ,
ಗಾಳಿಗೆ ಅಂಗಿಯುಬ್ಬಿ ಡುಮ್ಮನಾಗುತ್ತಿದ್ದೆ,
ನಾನು ಮಲಗಲೆಂದು
ಜೋಲಿ ಕಟ್ಟುತ್ತಿದ್ದ
ಅಮ್ಮನ ಸೀರೆಗಳೆಲ್ಲಾ
ಕೌದಿಯಾಗಿವೆ, ಚಳಿಗೆ ಬೆಚ್ಚಗಾಗಿಸಲು,
ಅದನ್ನು ಹೊಲಿದಿದ್ದು
ಕೆಳಗೆರೆಯ ಚೌಡಮ್ಮನಂತೆ
ಆಕೆ ಮುಖವಾಗಲೇ ಸುಕ್ಕುಗಟ್ಟಿದೆಯಂತೆ,
ಅರೆ!!! ನಾನೇಕೆ ಭಾವುಕನಾಗುತ್ತಿದ್ದೇನೆ,
ಎಲ್ಲಕ್ಕೂ ವಯಸ್ಸಾಗಲೇ ಬೇಕಲ್ಲವೇ,
ನಿನ್ನೆ ಮೊನ್ನೆಯವರೆಗೆ ಜೋಲಿಯೊಳಗಾಡುತಿದ್ದ
ನನಗೂ ಸಹ......
-ಪ್ರವರ
photo by: surya avi
ಬದಲಾವಣೆ ಹೊಸ್ತಿಲಲ್ಲಿ ಎಲ್ಲವನ್ನು ಸವೆಯುತ್ತ ಸಾಗಬೇಕು...ಹೊಸತರಲ್ಲಿ ಹಳೆತನವನ್ನು ಹುಡುಕುತ್ತಾ ಸಾಗಬೇಕು... Nice poem...
ReplyDelete