ನಾನೊಬ್ಬ ಕೊಳೆತ ಶವ


ತದೇಕ ಚಿತ್ತದಿಂದ ನೋಡುತಿದ್ದರೂ
ಅಸ್ಪಷ್ಟ ಚಿತ್ರಗಳೇ,
ಕೈಗೆಟುಗ ಹಿಡಿಯಷ್ಟು ಮೊಬ್ಬುಗಪ್ಪು
ದೂರದ ಗೆರೆಯ ಮೇಲೆ,

ಸುಮಾರು ದೂರದಿಂದ ಹಿಂಬಾಲಿಸುತಲಿದ್ದೇನೆ
ಯಾರೆಂದು ತಿಳಿಯದೇ,
ನುಸಿ ಮರಳಿನ
ಆಳಕ್ಕೆ ಇಳಿದಿರುವ ಹಾಗಿದೆಯಲ್ಲ
ನಾನು ಅರೆಕೊಳೆತ ಶವವಿರಬಹುದು
ಆಸೆಗಳ ಹುಳುಗಳು ನನ್ನೊಳಗೆ
ವಿಲ ವಿಲನೆ ಒದ್ದಾಡುತ್ತಿರಬಹುದು

ನೆಲಕ್ ಹಿಡಿದ ಮಂಪರಂತೆ
ಅಲೆಯುತ್ತಿದೆ ಮಬ್ಬುಗಪ್ಪು,
ಸೂರ್ಯನ ರಶ್ಮಿಯೋ ತೂಕಡಿಸುತ್ತಿದೆ
ಮರಳ ಮೇಲೆ,
ಚಣ ಚಣಕು ಬಿಸಿಯಾಟ
ಕಣ್ಣೊಳ ತಲ್ಲಣಕೆ,

ನಡೆದಷ್ಟೂ ದೂರಕ್ಕೆ
ಬಯಲ ಬಿಸಿಲಿನ ತಂತಿ
ಅದೇ ಆಕೃತಿಯ ಕುಣಿತ
ಅದು ನನ್ನ ನೆರಳಿರಬೇಕು
ನನ್ನ ಕೊಳೆತ ಶವದ ವಾಸನೆಗೆ
ದೂರ ಓಡುತ್ತಿರಬೇಕು


  
 

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ