ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, July 30, 2012

ಜೋಯಿಸರ ಮನೆಯೊಳಗೆ


ಜೋಯಿಸರ
ಮನೆಯ ಜೋಲಿಯೊಳಗಳುತಿದ್ದ
ಕಂದನಾ ಕಿವಿಯೊಳಗೆ
ಮಂತ್ರಗಳ ಜೋಗುಳ,
ಲೋಬಾನದ ಹೊಗೆ,
ಹಾಗೆ
ಜಗಲಿ ಮೇಲಿದ್ದ ಮುದುಕಿಯಾ
ಬೊಚ್ಚು ಬಾಯಿಯ ನಗೆ
ತುಳಸಿ ಕಟ್ಟೆಗೆ
ತಲೆಯು ತಿರುಗಿಹುದಂತೆ
ಶಾರದಮ್ಮಳ ಪೂಜೆಗೆ
ಪುಳಕಗೊಂಡು
ಮತ್ತೆ ಮೂಡಿದ ಸೂರ್ಯ
ಮೂಡಣದಿ ಕೆಂಪಾಗಿ
ಜೋಯಿಸರ ಪೂಜೆಗೆ
ಜಳಕಗೊಂಡು

No comments:

Post a Comment

ಅನ್ಸಿದ್ ಬರೀರಿ