ಅಲೆದಾಟ


ಈಸೊಂದು ಕನಸುಗಳ
ಹೆಗಲ ಮೇಲೊತ್ತುಕೊಂಡು
ರಾತ್ರಿಗಳ ಅಲೆಯುತಿಹ
ನಾನೊಬ್ಬ ಅಲೆಮಾರಿ,

ಗೆರೆಗಳಬ್ಬರವೆಲ್ಲ
ಹಗಲುಗಳುದರದಲಿ
ಸರಿದಿಹವು ಕಾಣದಲೇ,
ದೂರ ದಾರಿ

ಅಲ್ಲೊಂದು ಚಣ
ಇಲ್ಲೊಂದು ಚಣ
ಮೊಬ್ಬು ಹಗಲಿಗೆ ಕನಸು ಭಾರ
ಕತ್ತಲಿಗೆ ಮೈಯಿತ್ತ ದೀಪದಂತೆ
-ಪ್ರವರ

Comments

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ಸಂಜೆ ಹೊತ್ತು ನೆನಪಾದವರು:(