ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, June 9, 2012

ಹುಟ್ಟಬೇಕಿದೆ ಕವಿತೆ

 

ನನ್ನ ಭೂಮಿಯ ಒಡಲು
ನೀರಿಲ್ಲದೆ ಸುಡುವಾಗ
ಬಿಸಿಯ ನಿಟ್ಟುಸಿರು
ಜಾಲಿಗಿಡಗಳ ಮುಳ್ಳಿನಲ್ಲಿ,

ಒಣಗಿದಾ ಗಿಡಗಂಟೆ
ಬಡಕು ನಾಯಿಯ
ಊಳಿಡುವ ಸದ್ದಿಗೆ
ಮುಖ ಕಿವುಚಿ ಸತ್ತಿದೆ
ಬಯಲಿನಲ್ಲಿ,

ಬೋಳ್ ಮರದ ಬುಡದಲ್ಲಿ
ನೆರಳಿಗಂಗಲಾಚುತ್ತ
ಕೂತವನು ನಾನಲ್ಲ
ಅದು ಮುಂದೆ ಹುಟ್ಟಲಿದ್ದ
ಬಯಲ ಕವಿತೆ,
ಒಳಗೊಳಗೆ ಅಳುತಿದ್ದ
ಹೆಣವ ಮರೆತೆ......

1 comment:

ಅನ್ಸಿದ್ ಬರೀರಿ