ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, May 7, 2012

ಶಾಯರಿ(SHAAYARI)


~~~~~~~~~~~

ಸಾಗರದ್ ದಂಡ್ಯಾಗಿನ್ ಕಪ್ಪೀ ಚಿಪ್ಪು
ಬರೋ ಮಳೀಗಾ ಕಾಯ್ಲಿಕತ್ಯಾದ,!!
ಇನ್ನಾದರೂ ಯಾಕ್ ಬರುವಲ್ಲೀ ಹುಡುಗಿ
ನಿನ್ ಬರ್ಲಿಲ್ಲಾಂತ ಈ ಜೀವ ಸಾಯ್ಲಿಕತ್ಯಾದ!!

~~~~~~~~~~~


ಜೋರ್ ನಗಬ್ಯಾಡ್ ಹುಡುಗಿ
ನನ್ ತೋಟದಾಗಿನ್ ಹೂ ನಾಚ್ಕೊತವ,!!
ನೀ ಹಂಗಾ ನಕ್ಕೀ ಅಂದ್ರ
ಓಡಿ ಬಂದು ನಿನ್ನ ಚೆಂದದ್ ನಗೂನ ಬಾಚ್ಕೊತವ!!

~~~~~~~~~~~


ಬಾಟ್ಲಾಗಿನ್ ಶರಾಬಿನ ನಶೀ ಏರಿದ್ರೂ
ಒಂದು ರಾತ್ರ್ಯಾಗ ಇಳೀತದ!!
ನಿನ್ನ ತುಟ್ಯಾಗಿನ್ ನಶೀ ಹಂಗಲ್ಲಾ
ಓಮ್ಮೆ ಏರಿದ್ರ ಸ್ವರ್ಗಕ್ಕಾ ಎಳೀತದ!!
                              -ಪ್ರವರ

2 comments:

  1. ಭಲೇ ಇದಾವ್ ನೋಡ್ರಿ ..ಕೊನೆದ್ ಅಂತೂ ಮಸ್ತ್ ಅದಾ...

    ReplyDelete
  2. thanks ri yappa...... matte matte barrala....

    ReplyDelete

ಅನ್ಸಿದ್ ಬರೀರಿ