ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, May 16, 2012

ಮಣ್ಣೊಳಗಿನ ಬೀಜ

ಹಸಿ ಮಣ್ಣೊಳಗಿದ್ದ
ಬೀಜ ನಗುತ್ತಾ
ಮೊಳಕೆಯೊಡೆಯುತ್ತಿದೆ,
ಯಾರದೋ ಕೂಗಿಗೆ
ಓಗೊಟ್ಟಂತೆ,

ಆಕಾಶದೆತ್ತರೆಕೆ ಬೆಳೆದಿದ್ದ
ಹೆಮ್ಮರವ ಅಣಕಿಸುವಂತೆ
ಚಿಗುರ ನಾಲಿಗೆಯ ಚಾಚಿ

ಮಣ್ಣಾಗಿದ್ದ ಬೀಜಕ್ಕೆ
ಮತ್ತೆ ಹುಟ್ಟುವ ಬಯಕೆ
ಅದಕೇ ಈ ಜನ್ಮ,
ಸಾವಿಲ್ಲ ಬದುಕಬೇಕೆಂಬ
ತನ್ನದೆಯ ಛಲಕೆ....

No comments:

Post a Comment

ಅನ್ಸಿದ್ ಬರೀರಿ