ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Thursday, May 10, 2012

ಮಹಾಯಾನ

ಬದುಕೆಂಬುದು
ಒಂದು ಅಲೆದಾಟ
ನೆರಳಿನ ನೆಲೆ
ಹುಡುಕುವ
ಮಹಾಯಾನ
ಪ್ರತಿ ನಿತ್ಯ ಹೊಸತು
ನೆನಪಾಗಿ ನೆಪದಂತೆ
ಉಳಿಯಬೇಕು
ಹಳಸಿದ ಹಳತು

ಸೂರ್ಯ ಮುಳುಗಿದನೆಂದು
ಕಣ್ಣೀರು ಹಾಕದಿರು
ಹಣತೆಯಿದೆ ಚೂರು
ಬೆಳಕೀಯಲು.
ಬರಿ ಬೆಳಕೆ ಬಾಳಲ್ಲ
ಕತ್ತಲೆಯು ಜೊತೆಗಿರಲಿ
ನಿದ್ದೆಯೊಳಗೆದ್ದು ಓಡಾಡಲು

ಹೊಟ್ಟೆ ಹಸಿವಿನ
ತಂತಿ ಮೀಟುತಿದೆ
ನೋಡಿಲ್ಲಿ,
ಅಂಗುಲದ ಜಾಗಕ್ಕೆ
ಜಗ ಸಾಲದು,
ಕೊಂಚ ನಗು
ನಕ್ಕು ಬಿಡು ಅಳುವೆಲ್ಲ
ತೊಳೆವಂತೆ,
ಬದುಕ ಸೊಡರೆಲ್ಲ
ನುಣುವಾಗದು

No comments:

Post a Comment

ಅನ್ಸಿದ್ ಬರೀರಿ