ಹನಿಗಳು


ಎಲೆ-ಎಲ್ಲೆ
~~~~~~~
ನೆಲಕೆ ಬಿದ್ದ
ಒಣಗಿದೆಲೆಗೆ
ಚಿಗುರ ಮೇಲೆ
ಕೋಪ,


ತೂಕಡಿಕೆ
~~~~~~~
ಗೋಡೆ ಮೂಲೆಯಲ್ಲಿ
ಜೇಡ
ಟೈಂ ಪಾಸಿಗೆ
ಬಲೆ ಹೇಣೆಯುತಿತ್ತು,
ತೂಕಡಿಕೊಂಡು ಹಾರುತಿದ್ದ
ನೊಣ ಅಲ್ಲೇ ಬಿತ್ತು!!!!


ಮೌ ನಾ
~~~~~
ಮೌನಕ್ಕೆ
ಇರುವಷ್ಟು
ತಾಕತ್ತು
ಮಾತಿಗಿಲ್ಲ


ಆಟೋಗ್ರಾಫ್ ಬುಕ್ಕು
~~~~~~~~~~~~~~~
ಹಳೆಯ ಡೈರಿಯಲ್ಲಿದ್ದ
ಮುಖಗಳೆಲ್ಲ
ನಸು ನಕ್ಕು ಮಾತನಾಡಿಸಿದವು
ಕೆಲವು ಕ್ಯಾಕರಿಸಿ
ಉಗಿದವೂ ಕೂಡ


ಹೂ(ಡುಗಿ)
~~~~~~~
ಹುಡುಗಿ ಸಿಟ್ಟು
ಬಂದು
ಹಲ್ಲು ಮಸೆದು
ನನ್ನ
ಭುಜವ ಕಚ್ಚುತ್ತಿದ್ದಾಳೆ



ಇರುಳ ನೆರಳು
~~~~~~~~~~
ಏ!! ಹುಡುಗಿ
ನಿನ್ನ ನೆನಪುಗಳೆಲ್ಲ
ನೆರಳಂತೆ ನನ್ನ
ಹಿಂಬಾಲಿಸುತ್ತಿವೆಯಲ್ಲ,
ಕಾರಿರುಳಲೂ ಸಹ!!!!!!


ಚುಂಬನ
~~~~~~~
ಹರಿಯುತಿದ್ದ ನದಿ
ಸುಮ್ಮನೇ ನಿಂತಿದ್ದ
ದಡದಂಚಿಗೆ
ಚುಂಬಿಸಿ
ಪುಳಕಿಸುತಿತ್ತು



ಕೆನ್ನೆ ಕುಳಿ
~~~~~~~
ಆಕೆ ನಗುವಾಗಲೆಲ್ಲಾ
ಹುಟ್ಟಿ,
ಬಂದ ಸಿಟ್ಟಿಗೆ
ಸಾಯುತ್ತದೆ


ಕಣ್ಣು
~~~~~~~~‘
ಕಪ್ಪು
ಸುಂದರವೆಂದು
ಗೊತ್ತಾಗಿದ್ದೇ
ಆಕೆಯ ಕಣ್ಣು
ಕಣ್ಣ ಹುಬ್ಬು
ನೋಡಿದಾಗ



ತಣಿದ ದಾಹ
~~~~~~~~~
ಬಿಸಿಲಲ್ಲಿ
ಬಾಯಾರಿ
ನೀರಿಗೆ ತಡಕಾಡುವಾಗ,
ತುಟಿಯೊತ್ತಿ ತಣಿಸಿದಳು


ನಿಶೆ
~~~~~~~~~
ಆಕೆಯಿಂದಲೇ
ಸಂಜೆಗೆ ರಂಗೇರಿದ್ದು,
ರಾತ್ರಿಗೆ
ಮಂಪರೇರಿದ್ದು


ನಿರೀಕ್ಷೆ
~~~~~~~~~
ಸಾಗರ ದಂಡೆಯಲಿ
ಬಾಯ್ತೆರೆದು
ಕಾದು ಕೂತಿದ್ದ
ಕಪ್ಪೇ ಚಿಪ್ಪಿಗೆ
ಮೊದಲ ಮಳೆಯದೇ
ಧ್ಯಾನ


ಬೇಜಾರು
~~~~~~~~
ಘೋರಿಯಲ್ಲಿದ್ದ
ಶವ
ಬೇಜಾರಿಗೆ
ಮಗ್ಗುಲು ಬದಲಾಯಿಸಿತು


Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ