ಹಿಂಬಾಲಿಸುತಿಹ ಸಾವೆ



ಅಮ್ಮನ ಹೊಟ್ಟೆಯಲಿರುವಾಗಿನಿಂದ
ಹಿಂಬಾಲಿಸುತಿಹ ಸಾವೆ,
ನಾ ಹೆದರಲಾರೆ ನಿನಗೆ
ಯಾಕೆಂದರೆ ನೀನೇ ಗತಿ ತಾನೆ
ಜೀವನದ ಕೊನೆಗೆ......

ಮೌನ ಮಜ್ಜನದ ಎರಕ,
ಸಾವೆ ನಾ ನೂಲು, ನೀ ಚರಕ,
ಘಾಸಿಗೊಂಡವರದೆಲ್ಲ ಎರಡು
ದಿನದ ಮರುಕ,

ಒಮ್ಮೊಮ್ಮೆ ನೀ ಕಪ್ಪು,
ಇನ್ನೊಮ್ಮೆ ನೀ ಬೆಳಕು,
ರೌದ್ರವತೆಯ ಹೊತ್ತ
ಸಾವೆ ಕೆಲವೊಮ್ಮೆ ಕೆಂಪಾದೆಯ,
ರಕುತದೊಕುಳಿಯಾಡಿ ತಂಪಾದೆಯ

ಜ್ವಾಲಾಮುಖಿಯ
ಲಾವದಂತಾಗದಿರು ಸಾವೆ,
ಚಿತೆಗೂ ನಿಲಕದಂತಾದೀತು
ನನ ದೇಹ,
ಮಣ್ಣಿಗೂ ಸೇರದಂತಾದೀತು.

ಹಿಂಬಾಲಿಸು ಸಾವೆ ನನ್ನ
ಅಳುತಿಹ ಕಂದನ ಕಣ್ಣೊಳಗಿನ
ನೀರಂತೆ,
ಹುಲಿಗುಡ್ಡದಲಿ ಕೂತಾಗ ಬೀಸಿದ
ತಣ್ಣನೆಯ ಗಾಳಿಯಂತೆ,

ಹಿಂಬಾಲಿಸುತಿಹ ಸಾವೇ.............



Comments

  1. Rally superb... pravara..
    I am proud to say that i have friend like u who will always writes it just touches and close to our heart..

    Really if i write also i cant use words like you.. its gift to u..

    Keep it up..

    ReplyDelete
    Replies
    1. thanx lw vaagi......... neenu kavana odi cmnt madiddu khushi anistu...... keep reading maga....

      Delete
  2. ಚಂದದ ಕವನ ಪ್ರವರ....
    ಸಾವಿನ ಕುರಿತ ನೇರ ನುಡಿಗಳು ಇಷ್ಟವಾದುವು...

    ReplyDelete
    Replies
    1. ಸಾವು ನೇರವೊ, ದೇಹಕ್ಕೆ ಭಾರವೊ ಗೊತ್ತಿಲ್ಲದೇ ಬರೆದದ್ದು............ ಮೌನರಾಗ ನಿಮಗೆ ಧನ್ಯವಾದಗಳು....

      Delete
  3. ನಾನು ಕೂಡ ನಿಮ್ಮ ಬಯಲ ಹುಡಿ, ನಿಮ್ಮ ಬ್ಲಾಗು ತುಂಬಾ ಸುಂದರವಾಗಿ ಮೂಡಿ ಬಂದಿದೆ ಹೀಗೆ ಬರಿತಾ ಇರಿ ....

    ReplyDelete
    Replies
    1. ಹೋ.... ಯಾವೂರು ನಿಮ್ದು.......... ಪ್ರತಿಕ್ರಿಯಿಸಿದ್ದಕ್ಕೆ ಧನ್ಯದಾದಗಳು....

      Delete
  4. Awesome pravara... ಸಾವಿನಂತಹ ವಸ್ತುವನ್ನ ತೆಗೆದುಕೊಂಡರೂ - ನಿಮ್ಮ ಕವಿತೆ ಕಟ್ಟುವ ಶೈಲಿ, ಉಪಮೆಗಳೊಂದಿಗೆ ವಿಷಯವನ್ನ ವರ್ಣಿಸಿದ ರೀತಿ ಅದ್ಭುತ!

    ReplyDelete
    Replies
    1. ಹಾಗೆ ಬರೆಸಿದ್ದು ವಿಷಯವಷ್ಟೇ........ ನಾನದರ ಪ್ರಚಾರಕ........ ನೀವು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

      Delete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ