ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, March 12, 2012

"ಬುರ್ಖಾ ಹುಡುಗಿ"ಸಂಜೆಯಾಗಲೇ ಧಗೆ ಇಳಿದಾಗಿತ್ತು,
ಅತ್ತಿತ್ತ ಓಡಾಡಿಕೊಂಡಿದ್ದ
ಮೋಡಗಳು ಒಂದಕ್ಕೊಂದು ಅಪ್ಪಿ
ಪಿಸುಗುಡುತಿದ್ದವು,
ಬಸ್ಸಿನ ಕಿಡಕಿಯಿಂದ ನುಗ್ಗುತಿದ್ದ
ನುಗ್ಗಿ ಬರುತಿದ್ದ ಗಾಳಿ
ಬೆವರಿದ್ದ ಮೈಗೆ ತಂಪೆರೆಯುತಿತ್ತು,

ಟ್ರ್ಯಾಫಿಕ್ಕಿನಲ್ಲಿ ಸಿಕ್ಕಿ ಬಸ್ಸು
ಮುಂದೆ ಸಾಗಲು ತುಸು
ತಡವರಿಸುತಿತ್ತು,
ಹಸಿರು ನಿಶಾನೆಗೆ ಕಾಯುತ್ತಾ
ಕೂಗಾಡುತಿತ್ತು.

ಥಟ್ಟನೇ ಕಂಡವಳು
ಮುಸಲ್ಮಾನರ ಹುಡುಗಿ,
ಬುರ್ಖಾವ ತೊಟ್ಟು
ನವಿಲಿನಾ ನಡಿಗಿ,

ಕಪ್ಪು ಕಾಡಿಗೆ ಹುಬ್ಬು ಬಿಲ್ಲದು,
ಕಂದು ಕಣ್ಣಿನ ಬಣ್ಣವು
ತುಂಬು ಚಂದ್ರನ ಬಿಳಿಯ ಕದ್ದು
ಮುಖವು ನೋಡಲು ಸ್ವರ್ಗವು.
ಯಾತಕಾ ಮರೆಯು ಹುಡುಗಿ,
ತೆಗೆದಿಡು ಕೆಳಗೇ ಮುಸುಕನು,
ನನ್ನ ಹಾಗೆ ನಿನ್ನ ನೋಡಿ
ಪುಳಕಗೊಳ್ಳಲಿ ಮುದುಕನು

(ಕಾಲೇಜಿಂದ ಬರುವಾಗ ಒಂದು ಹುಡುಗಿಯ ನೋಡಿ ಅನ್ನಿಸಿದ್ದು ಹೀಗೆ.....)


No comments:

Post a Comment

ಅನ್ಸಿದ್ ಬರೀರಿ