ಕಟ್ಟೆ ಒಂಟಿಯಾಗಿದೆ...

ಒಗುರು ಒಗರಾದ ಬದುಕು,
ಬಿಕ್ಕಳಿಕೆ ಆಡುವಾ ಪ್ರತಿ
ಪದಕು,
ಉಸುರುಗಟ್ಟುವ ಆಸೆ,
ಗಾಳಿಗೆ ಕಷ್ಟವಾಗಿದೆ
ಅಡ್ಡಾಡಲು ಒಳ-ಹೊರಕೂ.
ಚಾಪೆ ಮಡಿಚಿಯಾಗಿದೆ,
ನಗ್ಗಿದ್ದ ತಟ್ಟೆ ಲೋಟ ತೆಗೆದಿಟ್ಟಾಗಿದೆ,
ಮನೆ ಹೊರಗೆ ನನಗಾಗಿದ್ದ
ಕಟ್ಟೆಯಿನ್ನು ಒಂಟಿಯಾಗಿದೆ.
ಎಲ್ಲರೂ ನನ್ನಿಂದ ದೂರಾದರೂ
ಕೆಮ್ಮು-ದಮ್ಮುಗಳು ಮಾತ್ರ
ಬಿಡದೇ ಗಟ್ಟಿಯಾಗಿ ಅಪ್ಪಿಕೊಂಡಿವೆ.
ಹಾಗೆ ಕಣ್ಣೊಳಗಿದ್ದ ಪಿಸುರೂ.......
Comments
Post a Comment
ಅನ್ಸಿದ್ ಬರೀರಿ