ಕಟುಗ ಸುಬಾನಿ

ತುಕ್ಕು ಹಿಡಿದ ತಗಡಿನ ಶೆಡ್ಡು,
ಪಂಚರ್ರಾಗಿ, ಕಡ್ಡಿ ಮುರಿದು
ಮೂಲೆ ಸೇರಿದ್ದ ಸೈಕಲ್ಲು
ಮೂಗಿನ ಸಿಂಬಳಕೆ
ನುಸಿ ಮಣ್ಣಿನ ಮೊಳಕೆ
ಮಟನ್ನು ಕಡಿದು
ಉಳಿದ ಮೂಳೆಗಳಿವೆ
ಎಸೆದಿದ್ದ ಚೂರು ಮಾಂಸದ
ತುಂಡಿಗೆ
ಬಾಲ ಕತ್ತರಿಸಿದ ನಾಯಿಗಳ
ಕಚ್ಚಾಟ
ಕಟುಗ ಸುಬಾನಿಯ
ಅಂಗಿಗೆ ಮೆತ್ತಿದ್ದ
ಕೆಂಪನೆಯ ರಗುತ
ಬೆಳಗ್ಗಿಂದ ಮೂರು
ಕುರಿಗಳ ಕಡಿದರೂ
ಹೊಳಪಿದ್ದ ಕಂದಲಿ...
ಎಂದೋ ಹರಿದು
ಈಗ ನಿಶ್ಚಲವಾಗಿ
ನಿಂತಿದ್ದ ಚರಂಡಿಯ
ನೀಚು ವಾಸನೆ
ಹೀಗಿದ್ದರೂ ಕಟುಗ
ಸುಬಾನಿ ನಗುತ್ತಿದ್ದಾನೆ
ಹವಾಯಿ ಚಪ್ಪಲಿಯಲ್ಲಿ
ಹೊಕ್ಕಿದ್ದ ಜಾಲಿಮುಳ್ಳುಗಳ
ತೆಗೆಯುತ್ತಿದ್ದಾನೆ.....
ಪ್ರವರ, ನಿಜಕ್ಕೂ ಅದ್ಭುತವಾಗಿ ಬರೆದಿದ್ದೀಯ. ವಿಷಯ ಕಾವ್ಯಕ್ಕೆ ಕಷ್ಟವಾದದ್ದೇ ಆದರೂ, ನಿನ್ನ ಜಾಣ್ಮೆಗೆ ತಲೆದೂಗಿಬಿಟ್ಟಿದೆ!
ReplyDelete