ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Tuesday, January 17, 2012

ಬೆಂಕಿಯಾರಿಸೊ ಪರಿ

ನನ್ನೆದೆಯೊಳಗೆ ಮೆಲ್ಲಗೆ
ಮೊಳಕೆಯೊಡೆಯುತ್ತಿದ್ದ
ಪ್ರೀತಿಯ ಬೆಂಕಿ ದೇಹವನಾವರಿಸುತ್ತಿದೆಯಲ್ಲಾ!!!
ಹೃದಯದ ಯಾವುದೋ ಮೂಲೆಯಲ್ಲಿ
ಕಿಡಿಯಾಗಿ ಹೊಕ್ಕಿ,
ರಕುತದೊಳಗೆಲ್ಲ ನುಗ್ಗಿ
ಕೆಂಪುತನವನ್ನೆಲ್ಲಾ
ಸರ ಸರನೇ ಮುಕ್ಕುತ್ತಿದೆಯಲ್ಲಾ!!!
ಆಕೆ ಕೇಶ ಕಪ್ಪಿನ ರಾತ್ರಿಯಲಿ
ಗಳಿಸಿದ್ದ ಕನಸುಗಳೆಲ್ಲಾ
ಧಗ ಧಗನೆ ಉರಿದು ಚೀರಾಡುತ್ತಿವೆಯಲ್ಲಾ!!!
ಬಿಸಿಯ ಬೇಗೆಗೆ
ತುಟಿಗಳೊಣಗಿ ಹಪಹಪಿಸುತ್ತಿವೆಯಲ್ಲಾ!!!
ಆಕೆಯ ಚೆಂಗುಲಾಬಿಯ ರಂಗ ಕದ್ದು
ನಳ ನಳಿಸುತ್ತಿಹ ಅಧರಗಳ
ಸ್ಪರ್ಷಿಸದ ಹೊರತು
ಬೆಂಕಿಯಾರುವ ಯಾವುದೇ ಸುಳುಹಿಲ್ಲ!!!!

3 comments:

  1. ಕಡೆಗೂ ಬೆಂಕಿಯಾರಿಸುವ ಪರಿಯನ್ನು ಕಂಡು ಹಿಡಿದೇ ಬಿಟ್ಟಿರಲ್ಲ...?!
    ಚೆನ್ನಾಗಿದೆ....

    ReplyDelete
  2. ಅವರವರ ದಾರಿಯೇ ಪ್ರೀತಿಗೆ ಸೈ...
    ಚೆನ್ನಾಗಿದೆ...

    ReplyDelete

ಅನ್ಸಿದ್ ಬರೀರಿ