ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ


(ಕಾಲೇಜು ನನ್ನ ಜೀವನದಲ್ಲಿ ಹತ್ತಾರು ಬದಲಾವಣೆಗಳನ್ನ ಹಾಗು ಹೀಗೆ ಬದುಕಬೇಕೆಂಬ, ಪ್ರೀತಿ ಎಂದರೆ ಹೀಗೆ, ಸ್ನೇಹಿತರೆಂದರೆ ಹೀಗೆಂಬ ಪಾಠಗಳ ಹೇಳಿಕೊಟ್ಟು ಗುರು, ನನ್ನ ಮನಸಲ್ಲಿ ಪ್ರೀತಿ-ಪ್ರೇಮಗಳ ಪದಗಳ ಹುಡುಕಾಟ ನಡೆಸಿದ ನೆನಪುಗಳನ್ನು ಹಾಗೂ ನೆನಪುಗಳ ಬೀಜಗಳ ಬಿತ್ತಿದವರ ಪಾತ್ರ ಎಲ್ಲವನ್ನು ನಿಮ್ಮೆದುರಿಗಿಡುವ ಕಸರತ್ತು ಅಷ್ಟೆ ಹಾಗೂ........ )



ಸ್ಕೂಲಿನಲ್ಲಿ ಮಕ್ಕಳು ಮಕ್ಕಳೆಂದೇ ನಮಗೆ ಮಕ್ಕಳ ಪಟ್ಟ ಕಟ್ಟಿದ್ದರು, ಕಾಲೇಜಿಗೆ ಸೇರಿಕೊಂಡು ದೊಡ್ಡವರಾಗಬೇಕೆಂದು ಪ್ರತಿಘ್ನೆ ಮಾಡಿದ್ದೆವು. ಕಾಲೇಜಿಗೆ ವಿಜ್ನಾನ ವಿಷಯದಲ್ಲಿ ಪ್ರವೇಶ ಪಡೆದಾದ ಮೇಲೆ ಕ್ಲಾಸಿಗೆ ಹೋಗುವ ಸುದಿನ ಬಂದಿತ್ತು. ಅಮ್ಮ ಯುದ್ಧಕ್ಕೆ ಹೊರಟುನಿಂತ ಸೈನಿಕನಿಗೆ ಆಶಿರ್ವದಿಸುವಂತೆ ಮುಖಕ್ಕೆ ಮಂಗಳಾರತಿ ಎತ್ತಿ ಹೊಸ ಪೆನ್ನನ್ನು ಜೇಬಿನಲ್ಲಿಟ್ಟು ಹೋಗಿಬಾ ಎಂದು, ಕಾಲೇಜಿನಲ್ಲಿ ಯಾರ ಜೊತೆಗೂ ಜಗಳವಾಡಬಾರದೆಂದು ಹೇಳಿ ಗೇಟಿನವರೆಗೂ ಬಂದು ಒಮ್ಮೆ ದೃಷ್ಟಿ ತೆಗೆದು ಹಾಕಿದರು, ಅಪ್ಪ ಐವತ್ತು ರೂಪಾಯಿ ಜೇಬಿನಲ್ಲಿ ತುರುಕಿ ಚೆನ್ನಗಿ ಓದು ಎಂದು ಹೇಳಿದರಾದರೂ ನನ್ನ ಓದಿನ ಸಲುವಾಗಿ ಅವರ ಮನಸಲ್ಲಿ ಕೊಂಚ ದುಗುಡವಿತ್ತು. ನಾನು ಹೊಸಬಟ್ಟೆಗಳ ತೊಟ್ಟು ಕೊಂಚ ಖುಷಿ ಕೊಂಚ ಭಯದಿಂದ ಹೊರಟು ನಿಂತೆ. ದಾರಿಯುದ್ದಕ್ಕೂ ಏನೇನೋ ಯೋಚನೆಗಳು ತಲೆಯೊಳಗೆ ಹೊಕ್ಕು ಹೊರ ಬರುತ್ತಿದ್ದವು. ಸರಿಯಾಗಿ ಒಂಭತ್ತಕ್ಕೆ ಕಾಲೇಜಿನ ಗೇಟನ್ನು ಪ್ರವೇಶಿಸಿದೆ. "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ವಿದ್ಯಾರ್ಥಿಯೇ" ಎಂಬ ವಾಕ್ಯ ಕಣ್ಣಿಗೆಟುಕಿತಾದರೂ ಕೈ ಮುಗಿಯುವ ಗೋಜಿಗೆ ಹೋಗಲಿಲ್ಲ.


ನೋಟೀಸು ಬೋರ್ಡಿನಲ್ಲಿ ನನ್ನ ಹೆಸರು ಹಾಗು ಯಾವ ಸೆಕ್ಷನ್ ಎಂದು ನೋಡಿಕೊಂಡವನೇ ತರಗತಿಯತ್ತ ಮುಖ ಮಾಡಿದೆ. ಕ್ಲಾಸಿನಲ್ಲಿ ಎಲ್ಲರೂ ಕೂತಿದ್ದನ್ನು ನೋಡಿ ನನ್ನ ಹಣೆ ಮೇಲಿಂದ ಬೆವರಿನ ಹನಿಗಳು ಪ್ರವಾಹದೊಪಾದಿಯಲ್ಲಿ ಸುರಿತ್ತಿದ್ದವು, ಹೊಸ ಕರ್ಚೀಪನ್ನು ಜೇಬಿನಿಂದೆತ್ತಿಕೊಂಡವನೇ ಒರೆಸಿಕೊಂಡೆನು. ಮೊದಲ ಬೆಂಚು ಕೈಬೀಸಿ ಕರೆಯುತ್ತಿತ್ತು ಅದರಂತೆಯೇ ವಿರಾಜಮಾನನಾದೆ. ಎಲ್ಲರೂ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವ ಸನ್ನಾಹದಲ್ಲಿದ್ದರು, ಆದರೆ ನಾನು ಕಾಲೇಜು ಸೇರಿದ್ದ ಹುಮ್ಮಸ್ಸಿಗೆ ಪುಸ್ತಕದ ಮೊದಲನೆ ಪೇಜಿಗೆ ಹೆಸರು, ಕಾಲೇಜು ಇತ್ಯಾದಿ ಇತ್ಯಾದಿಗಳನ್ನು ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ಮನೆಯಿಂದ ಕಾಲೇಜಿಗೆ ಬರುವಾಗ ತಲೆಯೊಳಗೆ ಬಂದು ಹೋಗಿದ್ದ ಯೋಚನೆಗಳೆಲ್ಲಾ ತಮ್ಮ ಛಾಯೆಯನ್ನು ಹಾಗೆ ಉಳಿಸಿ ಹೊಗಿದ್ದವು, ಕ್ಲಾಸಿಗೆ ಬರಲಿರುವ ಅತ್ಯಂತ ಸುಂದರ ಹುಡುಗಿ ಯಾರಿರಬಹುದು, ಅವಳ ಹೆಸರೆನಿರಬಹುದು, ಅವಳ ಊರ್ಯಾವದಿರಬಹುದು, ಅವಳನ್ನು ಮಾತನಾಡಿಸಲು ಏನೇನು ಮಾಡಬಹುದೆಂಬ ಯೋಚನೆಗಳೆಲ್ಲಾ ಹೊಗೆಯಾಡುತ್ತಿದ್ದವು. ಹಾಗೆಯೆ ಸುತ್ತಲೂ ತಲೆಯಾಡಿಸಿ ಕ್ಲಾಸಿನ ಮೂಲೆ ಮೂಲೆಗೂ ಕಣ್ಣು ಹಾಯಿಸಿದೆ ಕಾತರದಿಂದ ನೋಡಲು ತಡಕಾಡಿದೆ. ಹೂ ಹು ಅಂಥ ಪ್ರತಿಕೃತಿ ಕಾಣಲೇ ಇಲ್ಲ ಈಗ ಬೇಜಾರಾಗುವ ಸರದಿ.


ಬಸವರಾಜ ಸರ್ ಚಾಕ್ಪೀಸ್ ಹಿಡಿಸು ಎಂಟ್ರಿ ಕೊಟ್ಟರು, ಇವರು ಗಣಿತದಲ್ಲಿ ಮಾಹಾನ್ ಪಂಡಿತರು, ವಿಧ್ಯಾರ್ಥಿಗಳು ಕಲಿಯುವವರೆಗೂ ಪಟ್ಟು ಬಿಡಲೊಲ್ಲದೇ ಕಲಿಸುವವರು ಹಾಗೆಯೇ ಒಂದು ಕಾರು ಎರಡು ಬೈಕುಗಳಿದ್ದರೂ ಪೆಟ್ರೋಲ್ ಖರ್ಚು ಉಳಿಸುವ ಸಲುವಾಗಿ ಇನ್ನೊಬ್ಬರನ್ನು ಡ್ರಾಪ್ ಕೇಳುವಷ್ಟು ಜುಗ್ಗರೆಂದು ಹಾಗೆ ಹೀಗೆ ಎಂದು ಸೀನಿಯರ್ಸು ಹೇಳಿದ್ದು ನೆನಪಿಗೆ ಬಂತು. ಅವರು ತಮ್ಮ ಪರಿಚಯವನ್ನು ಮೂವತ್ತು ನಿಮಿಷಕ್ಕೂ ಕಡಿಮೆ ಇಲ್ಲದೇ ಹೇಳಿದರು ನಾವೂ ಅಷ್ಟೆ ಮೊದಲ ದಿನವೆಂದು ಸುಮ್ಮನೇ ಬಾಯಿಗೆ ಬೀಗ ಹಾಕಿಕೊಂಡು ಓಳ್ಳೆಯವರಂತೆ ಲುಕ್ಕು ಕೊಡುತ್ತಿದ್ದೆವು, ಅದಾದ ಮೇಲೆ ನಮ್ಮ ಪರಿಚಯ ಮಾಡಿಕೊಳ್ಳುವ ಸರದಿ! ಒಬ್ಬೊಬ್ಬರೆ ಹೆಸರು, ಊರು, ಓದಿದ ಶಾಲೆಯನ್ನು ಕೆಲವರು ಹೆದರುತ್ತಾ ಅಂಜುತ್ತಾ ಹೇಳಿದರೆ ಇನ್ನೂ ಕೆಲವರು ದೊಡ್ಡ ದ್ವನಿಯಲ್ಲಿ ನಗು ಮೊಗದಿಂದ ಹೇಳಿ ಬೆಂಚಿನ ಮೇಲೆ ಮತ್ತೆ ಅಂಡೂರಿದರು. ಸರದಿ ನನ್ನಲ್ಲಿಗೆ ಬಂದಾಗ ನಾನು ಪ್ರವರ ಎಂದೆ ಎಲ್ಲರಿಗೂ ಹೆಸರು ವಿಚಿತ್ರವಾಗಿಯೂ ಹೇಳುವುದಕ್ಕೆ ಕಷ್ಟವೆನ್ನಿಸುವಂತೆ ಅನಿಸಿತು, ಕೆಲವರಂತು ಅಲ್ಲಿಯೇ ನನ್ನೆಸರನ್ನು ಪ್ರಾಕ್ಟೀಸ್ ಮಾಡಿಯೂ ನೋಡಿದರು. ಏನೋ ಒಂಥರಾ ಅನ್ನಿಸಿ ಸುಮ್ಮನೆ ತಳವೂರಿದೆ. ಬಸಣ್ಣ ಸರ್ ನನ್ನೊಡನೆ ನೋಡಿ ಮುಗುಳ್ನಗು ನಕ್ಕರು. ಹೀಗೆ ಸ್ವಪರಿಚಯ ಸಾಗುತ್ತಾ ಕೊನೆ ಬೆಂಚನ್ನು ಸಮೀಪಿಸುತ್ತಿದ್ದಂತೆ ಸಂಗಣ್ಣ ಬೆಲ್ಲನ್ನು ನಾಲ್ಕೈದು ಬಾರಿ ಕಿವಿಯಲ್ಲಿ ಗುಯ್ ಅನ್ನುವಂತೆ ಬಾರಿಸಿದ್ದನು,


ಊಳಿದ ಮೂರು ಪೀರಿಯಡ್ ಗಳಲ್ಲಿ ರುದ್ರಮಂಜುನಾಥ್,ನಾಗವೇಣಿ ಹಾಗು ರಾಮಚಂದ್ರಪ್ಪರು ಅದೇ ಬಸಣ್ಣರ ಹಾದಿ ತುಳಿದರು, ಅಲ್ಲಿಗೆ ಕಾಲೇಜಿನ ಮೊದಲ ದಿನ ಸ್ವಲ್ಪ ಸಿಹಿಯಾಗಿಯೂ ಸ್ವಲ್ಪ ಕಹಿಯಾಗಿಯೂ ಆದಂತೆ ಅನ್ನಿಸಿತು. ಕಾಲೇಜು ಹುಡುಗನೆಂಬ ಮತ್ತದೇ ಠೀವಿಯಲ್ಲಿ ಪುಸ್ತಕ ಬೆರಳ ತುದಿಯಲ್ಲಿ ತಿರುಗಿಸುತ್ತಾ ಮನೆಯ ಕಡೆ ಹೆಜ್ಜೆ ಹಾಕಿದೆ..................

Comments

  1. ಮೊದಲ ದಿನದ ಕಾಲೇಜು ಅನುಭವವೇ ಅಂತಹುದು...ಅದೇನೋ ಪುಳಕ, ಉತ್ಸುಕತೆ, ನೀವೇ ಹೇಳಿದಂತೆ ದೊಡ್ದವರದೆವೆಂಬ ಹೆಮ್ಮೆ...ಹೀಗೆ ಏನೇನೊ..

    ನಿಮ್ಮ ಅನುಭವ, ಅವುಗಳನ್ನು ಪದಗಳಲ್ಲಿ ಹಿಡಿದಿಟ್ಟ ಬಗೆ...ಚೆನ್ನಾಗಿದೆ...

    ReplyDelete
  2. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.... ಮತ್ತೆ ಮತ್ತೆ ಬರುತ್ತಿರಿ....

    ReplyDelete
  3. ಚೆನ್ನಾಗಿದೆ... :)

    ReplyDelete
  4. ಬರೆದಿರುವ ಶೈಲಿ ತು೦ಬಾ ಚೆನ್ನಾಗಿದೆ ಕಣೊ ಪ್ರವರ....
    ಆದ್ರೆ ಬಸಣ್ಣ ಸರ್ ಬಗ್ಗೆ ಇನ್ನು ಬರಿಬೆಕಿತ್ತು...

    ReplyDelete
  5. basanna bagge bariyoke blog ella sakagalla brother.... adke swalpa introduction kottu bittidini....

    ReplyDelete
  6. Really it is good article pravara.. after reading this again i remembered the college days.. and my heartly thanka for you.

    no other days can replace college days.. that time we r just like "kurigalu" all the teachers did there job well but nobody said how these r useful in ur life and result of that is " v r suffering now."

    Basanna, rudramanjunatha, krishnappa, D.k, mallanagouda, all are just looks like old cinema real now. they just told what they bihurted.

    But we have to appreciate them, bcz of them only atleast we came to know that what is science...

    yours
    vageesha JM

    ReplyDelete
    Replies
    1. heart touching words bro, tat was awesome tym ever spend,,,,,, nc 2 see again..... ur damn true.... nw r came 2 kn wats da use of those subjects nd al.....

      Delete
  7. Thank you dude.. really you have a words within you keep on writing. and guide us also to write something, you have awasome writing skills.. and that is came to you by birth.. many more supports to you from my side always..

    As am lover of books am always expect some thing from you.. all the best.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ