ಹೀಗೊಂದು ಸಾಂತ್ವಾನ

ಅತ್ತೂ ಅತ್ತೂ ಕಣ್ಣೀರೆಲ್ಲಾ ಬತ್ತಿ ಮರಳುಗಾಡಾಗಿದೆ ಕಣ್ಣು ಆಕೆ ಮಾಡಿದ ಗಾಯ ಎದೆಯಲ್ಲಿ ಅಂಗೈ ಅಗಲದ ಹುಣ್ಣು ಇಷ್ಟು ದಿನ ಜೊತೆಗಿದ್ದು ಹೆಜ್ಜೆ ಮೇಲೆಜ್ಜೆಯನಿಕ್ಕಿ ಕಾಲು ಸೋಲುವವರೆಗೂ ಕೈ ಹಿಡಿದು ನಡೆದಿದ್ದಳು ಹೃದಯದೊಳಗಿನ ಪ್ರೀತಿಯ ತನುವೆಲ್ಲ ಧಾರೆಯೆರೆದು ತಾಯಂತೆ ಪೋಷಿಸಿದ್ದಳು, ನೋವು ಉಮ್ಮಳಿಸಿ ಬರುವಾಗ ನನ್ನ ಬಿಗಿದಪ್ಪಿ ಬೆಚ್ಚಗಿನ ಸಾಂತ್ವಾನ ಹೇಳುತಿದ್ದಳು ಮಳೆಯಲ್ಲಿ ಕೊಡೆ ಇಲ್ಲದೆ ನೆನೆದು ಮೈಮೇಲಿನ ಬಟ್ಟೆ ಒದ್ದೆಯಾಗಿ ಸಣ್ಣಗೆ ನಡುಗುವಾಗ ತುಟಿಗೆ ತುಟಿ ಒತ್ತಿ ಕಿಡಿ ಹೊತ್ತಿಸಿ ಆಕೆ ಹೋಗುವಾಗ ಹಿಂತಿರುಗಿ ಕಣ್ಣಂಚಲ್ಲೇ ಪೋಲಿ ನಗು ನಗುವಾಗ ಹಾ! ಆಕೆಗೆ ಆಕೆಯೇ ಸಾಟಿ ಈಗಾಕೆ ನನಗೆ ಜೊತೆಯಿಲ್ಲ ಜೊತೆಯಿಹ ನೆನಪುಗಳಿಗಾ ಕಸುವಿಲ್ಲ..... ಬತ್ತಿರುವ ಕಣ್ಣು, ಎದೆ ಮೇಲಿಹ ಹುಣ್ಣು ಎರಡಷ್ಟೇ..... ಇನ್ನಾರಲೂ ಮನಸಿಲ್ಲ