ಕಲ್ಲುಬಂಡೆ ಮತ್ತು ನದಿ

ಏಸೊಂದು ವರುಸದಿಂದ
ಆಸೆಯ ಉಸುರಿಲ್ಲದೆ
ಅದೇ ನದಿಯ ದಂಡೆಯ
ಮೇಲೆ ನಿಂತಲ್ಲೇ ನಿಂತಿದೆ
ಬರೀ ಕಲ್ಲು, ಬೃಹತ್ ಬಂಡೆಗಲ್ಲು
ಉಕ್ಕಿ ಹರಿದಿದ್ದ ನದಿಯ
ಪರಿವೆಯಿಲ್ಲದೇ, ಪರಿಷೆಯಿಲ್ಲದೇ
ತಾನೇನಾದೇನೆಂಬ
ಅಂಜಿಕೆಯೂ ಇಲ್ಲದೇ,
ಭಯಾನಕ ಅಲೆಗಳಿಗೆ
ಎದೆಯೊಡ್ಡಿ ನಿಂತಿತ್ತು
ಹೃದಯವಿಲ್ಲದೇ.
ಹಸಿರು ಪಾಚಿಯ,
ಖುಷಿಯ ಕುಹಕಕೆ
ಮುಖವ ಕಿವುಚದೆ ನಿಂತಿದೆ,
ಅಣಬೆಯ ಅಣಕಿಗೆ
ಕಿವಿಯ ನೂಕದೇ
ಕಲ್ಮುಖದ ಮೇಲೆ ನಗುವ ಕುಣಿಸಿದೆ.
ಬಿಸಿಲ ಬಾಧೆಗೆ
ನದಿಯು ಬಾಡಿ
ಹನಿ ಹನಿಯು ಬಾಗಿ ನಡೆದಿವೆ,
ನಾನು ಬಾಡೆನು,
ಬಿಸಿಲಲೊಣಗೆನು
ನಿನ್ನ ಬಿನ್ನಹ ಕೇಳೆನು
ಎಲ್ಲೆ ಇರದ ಕಲ್ಲು ನಾನು
ಇಲ್ಲಿಂದ ಎಲ್ಲಿಗು ಕದಲೆನು,
ನೀಲಿ ಬಾನಲಿ ಮೋಡವಿರುವವು,
ಅವುಗಳ ನೆರಳು ನನ್ನೆಯ ಮೇಲಿದೆ,
ಮಳೆಯ ಹನಿಗಳು ಬಂದೆ ಬರುವವು
ಎಂಬ ನಂಬಿಕೆ ಕಾಲನ ಮೇಲಿದೆ,
ಹೃದಯವಿಲ್ಲದ ಕಲ್ಲು ನಾನು
ಹೃದಯವಂತಿಕೆ ತುಂಬಿದೆ
ಹೃದವಿರುವ ಮನುಜ ನೀನು
ಮನಸು ಬರಿಯ ಮುಳ್ಳಲಿ ತುಂಬಿದೆ
ಪ್ರಕ್ರತಿ ಮತ್ತು ಮನುಜನೊಳಗಿನ ವ್ಯತ್ಯಾಸ ಸೊಗಸಾಗಿ ಮೂಡಿ ಬಂದಿದೆ.
ReplyDeleteಚೆನ್ನಾಗಿದೆ....
ಮನುಷ್ಯ ಹೃದಯವದ್ದರೂ ಕಲ್ಲು.... ಅನ್ನೋದೆ ಇದರ ಸಾರಾಂಶ....
ReplyDelete