ಕಪ್ಪು ನೆರಳು

ಉಪ್ಪು ನೀರಲ್ಲಿ ಕಪ್ಪಾಗಿ ಏನೋ
ನೆರಳಿನಂತೆ ಕಾಣುತ್ತಿದೆಯಲ್ಲ,
ಅದರಲೆಗಳ ಜೊತೆ ಸುಮ್ಮನೆ
ಮೆಲ್ಲಗೆ ಸಾಗುತ್ತಿದೆಯಲ್ಲ
ನೆರಳು ಏನನ್ನೋ
ಮಾತಾಡುತ್ತಿದೆ ಅದರ
ಮಾತುಗಳ ಕೇಳುವ
ಕಿವಿ ನನಗಿಲ್ಲವಲ್ಲ,
ಸತ್ತವರ ನೆರಳಂತಿದೆ ಅದು,
ಜೀವವಿದೆ ಎನ್ನಿಸಿದರೂ ಸಹಿತ
ನೆರಳಿಗೆ ಜೀವವಿದೆ ಎನ್ನುವುದು
ಮೂಢತನ ತಾನೆ
ಇದು ಯಾರದೂ ನೆರಳಲ್ಲ,
ಕಪ್ಪು ನೆರಳು ಎನ್ನುವುದರಲ್ಲಿ
ಯಾವುದೇ ಹುರುಳಿಲ್ಲ,
ಅದು ಇಣುಕಿದವನ ಕಪ್ಪು ಮನಸು
ಮುಪ್ಪಾಗಬಹುದಾದ ವಯಸ್ಸು
kappu neralu kavithe thumbaa chennaagi moodi bandide.
ReplyDeleteನೆರಳು ಇಲ್ಲದ ಬದುಕು ಎಲ್ಲಿದೆ ? ಕವನ ಚನ್ನಾಗಿದೆ .
ReplyDelete@ushodaya nd prasd: thanks
ReplyDelete