ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Tuesday, August 16, 2011

ನಾನು ನೀವಿಲ್ಲಿದ್ದೇವೆ


ಸಂಜೆಗೆಂಪಾರಿತ್ತು,
ಬಾನು ಕಪ್ಪೇರಿತ್ತು
ಬಾಯಾರಿ ಭುವಿಯು
ಸುಮ್ಮನೆ ಕುಳಿತಿತ್ತು

ಹಸಿರೆಲೆಯ ಸದ್ದಿಲ್ಲ,
ಕೋಗಿಲೆಯ ಕುಹುವಿಲ್ಲ,
ಜೇನುಹುಳು ಹುಡುಕುತಿಹ
ಹೂವಲ್ಲಿ ಮಕರಂದವಿಲ್ಲ

ನಿಡುಸುಯ್ಯೋ ಬೆಂಕಿಯಿದೆ
ಕನಸುಗಳ ಬಡಿತವಿದೆ
ಮೂಡಲಾರದ ಚಿತ್ತಾರಗಳ
ಓ ಎಂಬ ಕೂಗಿದೆ

ಇಲ್ಲೊಂದು ಮಸಣವಿದೆ
ಸತ್ತವರ ಕುರುಹಿದೆ
ಮೇಲೊಂದು ಕಾಂಚಾಣ
ದೊರೆಗಳ ಮಹಲಿದೆ

ನಾನು ನೀವಿಲ್ಲಿದ್ದೇವೆ,
ಹಗಲು ನಿದ್ರೆಯ ಹೊದ್ದೇವೆ
ಇನ್ನೊಬ್ಬರ ಚಿಂತೆಯಿಲ್ಲದ
ಚಿತೆಯಲ್ಲಿ ಮಲಗಿದ್ದೇವೆ

18 comments:

 1. ಕವನದ ಪ್ರತಿ ಸಾಲಿನಲ್ಲೂ ವಿಷಾದದ ಛಾಯೆ ಇದೆ. ಇ೦ಥಾ ಪರಿಸರದಲ್ಲಿ ಸ್ವಾರ್ಥಿಗಳಾದ 'ನಾನು ನೀವಿಲ್ಲಿದ್ದೇವೆ'. ಚೆನ್ನಾಗಿದೆ. ಅಭಿನ೦ದನೆಗಳು.

  ReplyDelete
 2. Abba! That was a kick in the brain. How thoughful of you. Tumba channagide Pravara..
  Please nange kannada kalisi koDteera?

  ReplyDelete
 3. ಕವನದ ಆಶಯ ಅಪಾರ! ಮಸಣದ ಗೊರಿಯಾಗಿರುವ ನಮಗೆ ಸುತ್ತಲಿನ ಬೆಚ್ಚಿಸುವ ಪ್ರಪಂಚದ ಅರಿವನ್ನು ತೀಕ್ಷ್ಣವಾಗಿ ಮಾಡುವಲ್ಲಿ ಕವನ ಯಶಸ್ವೀಯಾಗಿದೆ.

  ReplyDelete
 4. ಅರ್ಥಗರ್ಭಿತ ! ತುಂಬಾ ಚೆನ್ನಾಗಿದೆ .

  ReplyDelete
 5. ತುಂಬಾ ಇಷ್ಟ ಆಯ್ತು, ಪ್ರವರ. . . .ಮತ್ತಷ್ಟು ಬರಲಿ.

  ReplyDelete
 6. ನಾಗರಾಜ್ ಪ್ರಭಾಮಣಿ: ಎಲ್ಲರೂ ಹಾಗೆಯೇ ಇದ್ದೇವಲ್ಲವೇ.... ಪ್ರತಿಕ್ರಿಯೆಗೆ ಧನ್ಯವಾದಗಳು....

  ReplyDelete
 7. ಸ್ಪೈಸಿ ಸ್ವೀಟ್: ಹ ಹಾ! ಧನ್ಯವಾದಗಳು...

  ReplyDelete
 8. ಸೀತಾರಾಮ.ಕೆ: ನಿಮ್ಮ ಪ್ರತಿಕ್ರಿಯೆ ನನ್ನನ್ನು ಬೆಚ್ಚಗಿರಿಸುತ್ತಿದೆ, ಧನ್ಯವಾದಗಳು....

  ReplyDelete
 9. ಅಶ್ವಿನಿ: ಹೀಗೆ ಬರ್ತಾ ಇರಿ....

  ReplyDelete
 10. ನಾಗರಾಜ್: ಮೂಡ ಮತ್ತೆ ಟೈಮ್ ಇದ್ರೆ ಖಂಡಿತಾ ಬರಿತಿನಿ ಸರ್

  ReplyDelete
 11. ಸಾಲುಗಳಲ್ಲಿ ಆಳದ ಅರ್ಥವಿದೆ..
  ಕೊನೆಯ ನಾಲ್ಕು ಸಾಲುಗಳ ಅರ್ಥ ಉಳಿದೆಲ್ಲ ಸಾಲುಗಳಿಗಿಂತ ಬೇರೆ ಎನಿಸುತ್ತದೆ.
  ಚಿಂತೆಯಿಲ್ಲದ ಚಿತೆ ಎನ್ನುವುದಕ್ಕಿಂತ ಚಿಂತೆಯ ಚಿತೆ ಎಂದಿದ್ದರೆ ಚೆನ್ನಾಗಿರುತ್ತಿತ್ತೇನೋ.


  _ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ

  ReplyDelete
 12. ವಿಚಲಿತ: ಚಿಂತೆ ಇಲ್ಲದೇ ಇರೋದೇ ಚಿತೆಗೆ ಸಮಾನ ಅನ್ನೋದೆ ನನ್ನ ಭಾವನೆ ಸರ್.....

  ReplyDelete
 13. ಗಿರೀಶ್: ಧನ್ಯವಾದಗಳು......

  ReplyDelete
 14. heart touching....vry nice lines....

  ReplyDelete
 15. ಕವನ ನಿದಾನಕ್ಕೆ ತೆರೆದು ಕೊಳ್ಳುತ್ತಾ ಕೊನೆಗೆ ಬೆಚ್ಚ್ಚಿ ಬೀಳಿಸುವುದು ಮಾತ್ರವವಲ್ಲ , ಚಿ೦ತನೆಗೆ ಹಚ್ಚುತ್ತದೆ . ನಿಮ್ಮಕಿಚ್ಚು ಆರದಿರಲಿ .

  ReplyDelete
 16. Would you like to get more visitors from Chennai?

  Submit your blog in http://zeole.com/hyderabad . This is a one time submission.This would automatically submit a preview of your future blog posts in Hyderabad, with a link back to your blog.

  Enjoy more traffic from Hyderabad :-)

  ReplyDelete

ಅನ್ಸಿದ್ ಬರೀರಿ