ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, July 23, 2011

ಒಬ್ಬಾತ ಮತ್ತು ಓಯಸಿಸ್ಸು


ಮರಳು ದಿಬ್ಬಗಳ ಮೇಲೆ
ಓಡುತಿದ್ದನೊಬ್ಬ
ಒಂದೇ ಸಮನೆ ಉಸಿರ
ಬಿಗಿ ಹಿಡಿದು

ಹಿಂತಿರುಗಿ ನೋಡಿದರೆ
ತನ್ನದೇ ಹೆಜ್ಜೆಯ
ಗುರುತೂ ಇಲ್ಲ,
ಬಣಗುಡುವ ಮರಳುಗಾಡಲ್ಲಿ
ಜೀಗುಡುವ ಸದ್ದಿನ
ಹೊರತು ಮತ್ತೇನು ಇಲ್ಲ

ದೂರದಲ್ಯಾರೋ
ಕಾಣುತಿದ್ದಾರೆಂದು
ಅವರಿಂದೆರಡು ಹನಿ ನೀರು
ಸಿಕ್ಕು, ಒಣಗಿಹ ಬಾಯ
ದಾಹ ತೀರೀತೆಂಬ
ಆಸೆಗುದುರೆಯನೇರಿ
ಬಿಸಿಲಗುದುರೆಯ ಹಿಂದೆ
ಸುಮ್ಮನೆ ಓಡುತಿದ್ದಾನೆ

ಕಾಲಿಗತ್ತಿದ ಉಸುಕು
ಓಡಬೇಡೆಂದು ತಡೆಯಲಾಗದೆ
ಮತ್ತೆ ಮತ್ತೆ ಉದುರುತ್ತಿದೆ
ಬಿಸಿಲಗನ್ನಡಿಯಲ್ಲಿ ಯಾರೂ ಇಲ್ಲ
ಅವೆಲ್ಲವೂ ಭ್ರಮೆಯ ಬಿಂಬವಷ್ಟೆ.

ಇನ್ನೂ ಓಡುತಿದ್ದಾನೆ,
ವಾಸ್ತವದ ಅರಿವಿಲ್ಲದೆಯೇ
ಓಡುತ್ತಲೇ ಇದ್ದಾನೆ

9 comments:

 1. tumba chennagide Pravara :) Nimma blog na Munnudi kooda thumba chennagide!

  ReplyDelete
 2. ಬಹಳ ಚೆನ್ನಾಗಿದೆ.

  ReplyDelete
 3. Abba!! What words you have used Pravara.. Nange kannada marate hogide ansatte..

  Too good! Loved the poetry!

  ReplyDelete
 4. ಬಸು: ಧನ್ಯವಾದಗಳು, ನಿಮ್ಮ ಆಗಮನ ಖುಷಿ ತಂದಿದೆ..... ಬಳ್ಳಾರಿ ಜಿಲ್ಲೆಯ ಸ್ಲೋಗನ್ನು ಅದು....

  ReplyDelete
 5. ರಾಜೇಶ್:ಸದಾ ಸ್ವಾಗತ ನಿಮಗೆ.

  ReplyDelete
 6. ಗಿರೀಶ್:ತುಂಬಾ ಧನ್ಯವಾದಗಳು.

  ReplyDelete
 7. ಸ್ಪೈಸಿ ಸ್ವೀಟ್: ಕೆಲವೊಂದು ಪದಗಳು ಸಂದರ್ಭಕ್ಕೆ ತಕ್ಕಂತೆ ಜೋಡಣೆಯಾಗಿವೆ ಅಷ್ಟೆ ಅದರಲ್ಯಾವ ವಿಶೇಷತೆಯೂ ಇಲ್ಲ.... ಏನೇ ಆಗಲಿ ನಿಮ್ಮ ಪ್ರತಿ ಕ್ರಿಯೆಗೆ ಧನ್ಯವಾದಗಳು

  ReplyDelete

ಅನ್ಸಿದ್ ಬರೀರಿ