ನಾನು ಮತ್ತು ಸಂಜೆ

ಸಂಜೆ ಹೊತ್ತು,
ಕತ್ತಲಾಗದೇ ಬೆಳಕ
ಚೂರು ಪಾರು ಹಾಗೇ ಉಳಿದಿತ್ತು.
ಸುತ್ತಲೆಲ್ಲೂ ಸದ್ದಿನ
ಗುರುತಿಲ್ಲ, ಮೌನವೇ ಕಾಡಿತ್ತು.
ನಾನಿದ್ದೇನೆ, ನನ್ನ ಜೊತೆ
ಅಳಿದುಳಿದ ಅವಳ ನೆನಪುಗಳು
ಸಂಜೆಗೆಂಪಿಗೆ ಕಾವೇರಿ
ಕೇಕೆ ಹಾಕಿ ನಗುತ್ತಿದ್ದ ಕನಸುಗಳು
ಮೇಲಿದುರುತ್ತಿದ್ದ ಎಲೆಗಳೆಲ್ಲ
ತಲೆ ಸವರಿ ಸಮಾಧಾನ ಹೇಳುತಿದ್ದರೆ
ಜವುಳು ಮಣ್ಣು ನನ್ನೊಡಲ
ಸೇರೆಂದು ಕಾಲೆಳೆಯುತಿತ್ತು
ನಿನಗೆ ಸಾವೇ ಸರಿಯೆಂದು ತಿಳಿ ಹೇಳುತಿತ್ತು
ಅತ್ತ ಓಡಲೂ ಆಗದೆ, ಇತ್ತ ನಿಲ್ಲಲೂ ಆಗದೇ
ಇನ್ನೂ ಅಲ್ಲೇ ಇದ್ದೇನೆ
ಜೀವ ಹೊಸತಿನ ಗುರುತೋ
ಹಳತು ಜೀವದ ಸಾವೋ
ಇನ್ನೂ ಉತ್ತರ ಸಿಗದೇ ಅಲ್ಲೇ ಅವಳಿಗಾಗಿ ಕಾಯುತಿದ್ದೇನೆ
ಕಯೋದ್ರಲ್ಲಿರೋ ಮಜಾ ಒಂತರಹದ ಖುಷಿ ತರುತ್ತದೆ
ReplyDeleteಆದ್ರೆ ಅವಳು ಬಂದರೆ ಸರಿ ಬಾರದಿದ್ದರೆ ಅನ್ನೋ ಚಿಂತೆಲಿ ಕಾಯೋದು ಬಹಳ ನೋವು ತರುತ್ತದೆ...
ನಿಮ್ಮವಳು ಬೇಗನೆ ಬರಲೆಂದು ಆಶಿಸುತ್ತೇನೆ ..
ಕಾಯೋದ್ರಲ್ಲಿ ಅದೆಂಥಾ ಸುಖಾನೋ ನಾ ಕಾಣೆ..... hammm lets hope....
ReplyDelete