ಬಾಳು ಮತ್ತು ಬಣ್ಣ

ಬಣ್ಣ ಹಚ್ಚಿದೆ ಮನಸು
ತಾನು ಬದುಕುವ ಸಲುವಾಗಿ,
ತನ್ನವರ ಬದುಕಿಸುವ ಸಲುವಾಗಿ
ನಾಲಿಗೆಗೆ ಒಂದಿಷ್ಟು
ಸುಳ್ಳುಗಳ ಬಣ್ಣ,
ಬರಿ ದೇಹಕೆ ರಂಗು-ರಂಗಿನ
ಬಟ್ಟೆಗಳ ಬಣ್ಣ
ಏನೂ ಇರದ ಖಾಲಿಯಾಗಸವೇ
ನೀಲವಾಗಿದೆಯಲ್ಲ,
ನೂರೆಂಟು ಆಸೆಗಳಾಗರ ನಮ್ಮೀ ಮನಸು
ಬಣ್ಣ ಹಚ್ಚಿದರೆ ತಪ್ಪಿಲ್ಲ
ಉಸಿರೀವ ಮರಕೊಂದು ಬಣ್ಣವಾದರೆ
ಉಸಿರೆಳೆವ ನಮಗೊಂದು ಬಣ್ಣ
ಸತ್ತಾಗ ಒಂದತೆ, ಸುಟ್ಟಾಗ ಮಗದೊಂದು
ಬಾಳೆಂದರೆ ಹಾಗೆ ತಾನೆ ಗೋಸುಂಬೆಯ ಹಾಗೆ
ಬದುಕುವ ಸಲುವಾಗಿ ಹಚ್ಚಿದ ಬಣ್ಣ
ಸಾಯುವಾಗಿರುವುದಿಲ್ಲ
ಸಾಧ್ಯವಾದರೆ ಬದುಕಿಬಿಡ ಬಣ್ಣವಿಲ್ಲದೆ
ಬಾಳಿ ಬಿಡಿ ರಂಗಿನ ಹಂಗಿಲ್ಲದೆ
Wow, True lines; but i think its difficult to exist without BANNA.
ReplyDeletevery difficult nagaraj..........
ReplyDeleteNiceeeeeeeeee.......
ReplyDeleteಪ್ರವರ್ ..... ಹೇಳಿದ್ದೇನೋ ನಿಜ.....
ReplyDeleteಆದ್ರೆ black&white ಬದುಕನ್ನ ಯಾರಿಷ್ಟ ಪಡ್ತಾರೆ...
ಹುಚ್ಚರ ನಡುವೆ ಹುಚ್ಚರಂಗಿರೋನೇ ಜಾಣ....
ಕೊನೆಯ ಎರಡು ಸಾಲು ಕವನ ಮತ್ತು ಬದುಕು.
ReplyDeleteಕವನ ಚೆನ್ನಾಗಿದೆ...
ReplyDeleteಆದರೆ ಸರ್..,ಬಣ್ಣವಿಲ್ಲದ, ರಂಗಿನ ಹಂಗಿಲ್ಲದ ಬದುಕಲ್ಲಿ ಕನಸುಗಳಿರುವುದು ಅಸಾದ್ಯ...ಕನಸಿಲ್ಲದ ಬದುಕನ್ನು ಬದುಕಿ ಬಿಡುವುದಾದರು ಹೇಗೆ ಹೇಳಿ...?!!