ದತ್ತು ಪಡೆಯಿರಿ ನನ್ನ ಕೊಬ್ಬಿದ ಕನಸುಗಳ....

ಕೈಗೆಟುಕದಿರುವ ಒಂದಿಷ್ಟು ಕನಸುಗಳಿವೆ
ಯಾರಾದರು ದತ್ತು ತೆಗೆದುಕೊಳ್ಳಿ ನನ್ನಿಂದ
ಎಲ್ಲವೂ ನನಸಾಗಲು ಹಾಂ! ಎಂದು ಒಪ್ಪಿರುವಾಗ
ಇವಷ್ಟೇ, ನನ್ನ ಸತಾಯಿಸುತಿವೆ......
ನಾಲ್ಕೈದಿರಬಹುದು ಅಷ್ಟೆ, ಸ್ವಲ್ಪ
ಪ್ರೀತಿ ತೋರಿದ್ದಕ್ಕೆ ಕೊಬ್ಬಿ ಕೊರಡಾಗಿವೆ,
ಒದ್ದು ಬುದ್ದಿ ಕಲಿಸೋಣವೆಂದರೆ
ಮನಸ್ಸೇ ಬರುತ್ತಿಲ್ಲ ಪ್ರೀತಿಯಿಂದ
ಸಲುಹಿರುವೆನಲ್ಲವೆ.........
ಸಾವಿರಾರು ಬಣ್ಣಗಳ ತುಂಬಿರುವೆ
ಹಗಲಿರುಳೆನ್ನದೆ ಚಿತ್ತಾರವಾಗಿಸಿಹೆ
ಕಪ್ಪು ಕನಸುಗಳಿಗೆ ಬಣ್ಣ ಕೊಡುವುದೆಂದರೆ
ಸುಮ್ಮನೆಯೇ,.....
ಸಾವಿರಾರು ಸುಂದರಿಯರು ಬೆವರು ಸುರಿಸಿದ್ದಾರೆ
ನನ್ನ ಬಿಸಿಲ ಬಯಲ ನಾಡಿನ ಮುಗುದ ಜನಗಳ ಮುಗುಳು
ನಗುವಿನ ಹಸನಾದ ಹರವಿದೆ,
ಇವರೆಲ್ಲರ ಕರೆಸಿ ಹೇಳಿ ಮಾಡಿಸಿದ
ಕಣ್ಣ ಕನಸುಗಳಿಂದು ನನಸಾಗುತ್ತಿಲ್ಲ.....
ಸರಿ ದಾರಿ ತೋರಿಸಿ ನನ ಕನಸುಗಳ
ಕೈ ಹಿಡಿಯಿರಿ......
ನಿಮ್ಮ ಕನಸುಗಳೆಂದು ಭಾವಿಸಿರಿ
ನಿಮ್ಮ ಮನಸುಗಳೆಂದು ಪೋಷಿಸಿರಿ....
ಕೆ ವಿ.. ರವರೇ ನನಸಾಗುವ ಕಾಲ ಬಂದೇ ಬರುತ್ತದೆ ಸ್ವಲ್ಪ ಕಾಯಿರಿ
ReplyDeleteನಿಮ್ಮ ಕವನದ ವಿಚಾರಧಾರೆಗಳು ಅದ್ಭುತವಾಗಿದೆ
ಶುಭಾಶಯಗಳು
ನಿಮ್ಮ ಕನಸುಗಳೆಲ್ಲಾ ನನಸಾಗಲಿ ..
ReplyDeletemahabha mattu manamuktha avare dhanyavaadagalu....
ReplyDeleteNimma ella kanasugalu nansaagali...Kavana chennagide...
ReplyDeletesuper maga.. nanu ninna abhimani....
ReplyDelete