ನದಿಯ ತಟದಲ್ಲೊಂದು ಬೋಳು ಮರ


ನದಿಯ ತಟದಲ್ಲೊಂದು
ಬೋಳು ಬೋಳಾದ ಮರ
ಅದರ ಬುಡದಲ್ಲೊಂದಿಷ್ಟು
ಹಸಿರು ಹುಲ್ಲು

ಬೋಳಾದ ಮರಕ್ಕೆ
ಹತ್ತಾರು ಕಾಗೆ-ಗುಬ್ಬಿ ಗೂಡುಗಳು
ನದಿಯ ದಂಡೆಯಲ್ಲಿದ್ದರೂ
ನೀರುಣ್ಣದ ಮರ
ಎಷ್ಟೇ ಗಾಳಿ ಬೀಸಿದರೂ
ನಿಂತಿದೆ ಅಲ್ಲಾಡದೆ

ಸುಮಾರು ವರುಷಗಳಾಯಿತು
ಹಾಗೆ ನಿಂತು
ಯಾರನ್ನೋ ಕಾಯುತ್ತಿರುವಂತಿದೆ
ಹಸಿರುಡಲೊಲ್ಲದು, ಇರಬೇಕಂತೆ
ಹೀಗೆ ವಿಧವೆಯಂತೆ
ಯಾರದೋ ಮನೆಯ ಹಬ್ಬದಡುಗೆಗೆ
ಉರಿ ಹಚ್ಚಿದ ಒಲೆಯ ಕಟ್ಟಿಗೆಯಾಗಬೇಕಂತೆ
ಅದಕ್ಕೆ ಈ ತಪಸ್ಸು....

Comments

  1. ವಾವ್,
    ಸಮರ್ಪಣಾ ಭಾವವನ್ನ ಚೆನ್ನಾಗಿ ಹೇಳಿದ್ದೀರ.
    ಮರವೂ ಕಾಯುತಲಿದೆ, ಎಲ್ಲವೂ ಅಷ್ಟೇ ಯಾರ ಜೊತೆ ಏನು ಘಟಿಸಬೇಕೋ ಅದು ಅವರಲ್ಲಿ ಘಟಿಸುತ್ತದೆ. ಅಲ್ಲಿಯವರೆಗೂ ಕಾಯಬೇಕು.
    ಹಿರಿಯರಾದ ಸತ್ಯಕಾಮ ಅವರು ಬರೆಯುತ್ತಾರೆ "ಸಮೃದ್ದಿ ಸಂಗ್ರಹಣೆಯಿಂದಲ್ಲ, ಸಮರ್ಪಣೆಯಿಂದ"
    ಪ್ರವರ ಮುಂದುವರೆಯಲಿ . . . .

    ReplyDelete
  2. ಧನ್ಯವಾದಗಳು ನಾಗರಾಜ್ ಅವರೆ.....

    ReplyDelete
  3. ಚೆನ್ನಾಗಿ ಬರೆದಿದ್ದೀರಾ ಪ್ರವರ.. :)

    ReplyDelete
  4. ನದಿಯ ತಟದಲ್ಲೊಂದು ಬುಡವುರುಳಿ ಬಿದ್ದ ಬೋಳು ಮರ..
    ಚೆನ್ನಾಗಿದೆ ಲೇಖನ..

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ