ನಾಚುತ್ತಿದೆ ನೂರು ದಾಟಿದ ಮುದುಕಿ


ಕುಣಕಿ ಚೀಲದಲಿ ನಾಲ್ಕೈದು ಎಲೆ,
ಪುಡಿಯಡಿಕೆ, ಚಿಕ್ಕ ದಬ್ಬಿಯಲ್ಲೋಸ್ಟು
ನುಣ್ಣನೆಯ ಸುಣ್ಣ....
ಬೆಳ್ಳಿ ಕೂದಲ ಹೊದಿಕೆ ತಲೆಗೆ
ನೂರಾರು ಹೊಲಿಗೆ ಹಾಕಿರುವ ಸೀರೆ
ಮುಚ್ಚಲು ಸುಕ್ಕುಗಟ್ಟಿದ ಮೈಯ್ಯ...
ಬಾಯಿ, ಇಲಿಯ ಬಿಲದಂತಿದೆ
ಹುಡುಕಾಡಿದರು ಒಂದೇ ಒಂದು ಹಲ್ಲಿಲ್ಲ...
ತನ್ನ ಗಂಡ ಪ್ರೀತಿಯಿಂದ ಕೊಟ್ಟಿದ್ದ
ಬೆಳ್ಳಿ ಕೈಗಡಗಗಳು ಹಾಗೆಯೇ
ಫಳಗುಡುತ್ತಿವೆ,
ಸವೆಯಬಾರದೆಂದು ಕಬ್ಬಿಣದ
ಪೆಟ್ಟಿಗೆಯಲ್ಲಿ ಭದ್ರವಾಗಿವೆ....
ಗಂಡನ ಹೆಸರ ಕೇಳಿದರೆ!
ಇನ್ನು ನಾಚುತ್ತಿದೆ ನೂರು ದಾಟಿದ ಮುದುಕಿ,
ಮೊನ್ನೆ ಹತ್ತು ತುಂಬಿದ ಮರಿ ಮೊಮ್ಮಗನ
ಮದುವೆ ನೋಡಬೇಕಂತೆ....
ಅಬ್ಬಬ್ಬಾ ಬದುಕುವ ಪ್ರೀತಿಯೆಂದರೆ ಇದು,
ಈಗಿನವರು ನಾವುಗಳು ಅರವತ್ತಕ್ಕೆ ಸುಸ್ತೋ ಸುಸ್ತು...
(ಮನೆಯಲ್ಲಿ ಇದ್ದ ಮೂರು ಅಜ್ಜಿಗಳಲ್ಲಿ, ಒಬ್ಬಜ್ಜಿಯ ಬದುಕು ಹೀಗೆ)

Comments

  1. ಸೊಗಸಾಗಿದೆ.. ಅವರಿಗೂ ನಮಗೂ ಅಜಗಜಾಂತರ ಬಿಡಿ! ಬದುಕು ಅಂದ್ರೆ ಅವರದ್ದೇ!

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ