ನನ್ನ ಜಿಲ್ಲೆಯ ಕತೆ



ಹಚ್ಚ ಹಸಿರಿತ್ತು, ಬೆಟ್ಟಗಳ ಸಾಲಿತ್ತು
ಅಲ್ಲಲ್ಲಿ ಹರಿದಿದ್ದ ಝಾರಿಯಿದ್ದವು
ಕಲ್ಲೆದೆಯ ಮೇಲೆ ಹಸಿರುಟ್ಟ
ಚಿಗುರಿದ್ದವು
ಮಳೆ ಬಂದ ಮಾರನೆಯ
ದಿನ ಮಣ್ಣಿನ ಘಮವಿತ್ತು,
ಮರದ ಕೊಂಬೆಗಳ ಮೇಲೆ
ಹಕ್ಕಿಗಳ ಗೂಡಿದ್ದವು
ಅದರೊಳಗೆ ಹಕ್ಕಿ ಮರಿಯಿದ್ದವು,
ಕಾಡೆಲ್ಲ ಅಲೆದಾಡಿ ಹುಲ್ಲ
ಮೆಯುತಲಿದ್ದ ಜಿಂಕೆ ಗುಂಪಿದ್ದವು,
ಪ್ರತಿಯ ಎಲೆ ಎಳೆಯಲ್ಲೂ
ಬಾಳ ಕನಸಿದ್ದವು....
ಎಲ್ಲವೂ ಧೂಳಾಗಿವೆ, ಕೆಂಪು ಹುಡಿಯಾಗಿವೆ
ಅದುರು ಅದುರೆಂಬ
ಶಬ್ದಗಳೇ ತೆಲಾಡಿವೆ...
ಡೈನಮೇಟಿನ ಸ್ಪೋಟಕೆ
ಚೂರು ಚೂರಾಗಿರುವ ಕಲ್ಲುಗಳಿವೆ,
ರಾಕ್ಷಸಾಕಾರದ ಬುಲ್ದೊಜರುಗಳಿವೆ,
ಕೆಮ್ಮಣ್ಣು ಮೆತ್ತಿದ ಬಡ ಜನಗಳಿದ್ದಾರೆ
ಬಟ್ಟ ಬಯಲಿದೆ, ಕೆಟ್ಟ ಬಿಸಿಲಿದೆ
ಬಿಳಿಯ ಬಟ್ಟೆಯನುಟ್ಟ ಗಣಿದಣಿಗಳಿದ್ದಾರೆ
ಕಣ್ತೆರೆದು ನೋಡಲು ಏನು ಉಳಿದಿಲ್ಲ
ನೋಡ ಹೋದರೆ ಬರಿ ಧೂಳು
ಇದುವೇ ನನ್ನ ನಾಡಿನ ಗೋಳು
touchingg
ReplyDeletetumbaa hidisitu
hi
ReplyDeletenimm blog iga tane nodide odi
aa mele hegide anta heluve .mostly ur blogs so intersting ..!!
very well put up the entire thing in just two paragraphs! Good job :) Liked it :)
ReplyDelete