ಬಾಳು ಹೀಗೂ ಇದೆ

ತಿಂಗಳ ಹಸುಗೂಸು
ಕಂಕುಳಲ್ಲೇ ಇದೆ
ಅಳುತ್ತಲಿದೆ
ಹರಿದ ಹಳೆಯ ಸೀರೆಯಲ್ಲಿ ಮಗುವ
ಕಟ್ಟಿಕೊಂಡಿದ್ದಾಳೆ,
ಹಸಿವಾಗಿರಬೇಕು,
ಜಲ್ಲಿ ಕಲ್ಲುಗಳ ಹೋರುತಿದ್ದಾಳೆ
ಅದರಮ್ಮ....
ಅಪ್ಪ ಎಲ್ಲೋ ಕುಡಿದುಕೊಂಡು
ಮೋರೆಯಲ್ಲೆಲ್ಲೋ ಬಿದ್ದಿರಬೇಕು
ಮಗುವಿನ ಅಳು ಅವನಿಗೆ
ಕೇಳುತಿಲ್ಲ...
ಹೆತ್ತವಳಿಗೆ ಕೇಳುತ್ತಿದೆ
ಆದರೆ ಮೊಲೆಯಲ್ಲಿ ತೊಟ್ಟು
ಹಾಲಿಲ್ಲ....
ಬಿಸಿಲಲ್ಲಿ ಭಾರದ ಪುಟ್ಟಿ ಹೊತ್ತು
ಹೊತ್ತು ಬತ್ತಿಹೋಗಿದೆ...
ಹಾಗೆಯೆ ಬಾಳಬೇಕೆಂಬ
ಕನಸುಗಳು ಬತ್ತಿ ಹೋಗಿವೆ
ಮಗು ಇನ್ನೂ ಅಳುತ್ತಲೇ ಇದೆ
ಸುಮ್ಮನಿರಿಸಲು ಇನ್ನೇನು
ಮಾಡಿಯಾಳು....
ಅದರ ಹಸಿವಿನ ಅಳು
ಕೇಳದಿರಲೆಂದು
ಬಾಯ ಗಟ್ಟಿಗಾಗಿ ಮುಚ್ಚಿದ್ದಾಳೆ.....
ಅವಳಂತೆ ಪೂರ್ತಿಯಾಗಿ
ಅಳು ನಿಲ್ಲಿಸಿತ್ತು
ನಿಟ್ಟುಸಿರ ಬಿಡುತ್ತಾ ಮಗುವ
ನೋಡಲು ಉಸಿರೇ ನಿಲ್ಲಿಸಿತ್ತು....
ಅಲ್ಲಿಗೆ ಅದರ ಹೊಟ್ಟೆ ತುಂಬಿಸಲಾರದಿದ್ದರೂ
ಹೆತ್ತ ತಪ್ಪಿಗೆ ಅಳುವ ಸರದಿ ಅವಳದ್ದಾಗಿತ್ತು....
Jeevana andre iste guru...
ReplyDelete(NIMMA PREETIYA EKAANGI)
ಹೌದು ಇಂದಿನ ಒಂದು ವರ್ಗದ ಜನರಲ್ಲಿ ಬಾಳ ಬಂಡಿಯ ಒಂದು ಚಕ್ರ ಇದ್ದೂ ಇಲ್ಲದಂತಿರುತ್ತಿರುವುದು ವಿಪರ್ಯಾಸ. ಅದರ ಒಂದು ಮುಖವನ್ನು ನೀವು ಬರೆದಿರುವಿರಿ. ಅತೀ ಶ್ರೀಮಂತ ವರ್ಗದಲ್ಲಿ ಅಹಂನಿಂದ ಇನ್ನೊಂದೇ ರೀತಿಯ ಒಂಟಿ ಚಕ್ರದ ಬಂಡಿಯನ್ನು ನಡೆಸುವ ಸಂಸಾರಗಳೆಷ್ಟೋ.
ReplyDeleteits really a heart touching poem its simply emotional
ReplyDeletechennagide..:)
ReplyDeleteವಾಸ್ತವದ ಚಿತ್ರಣ..
ReplyDeletethumba chennagi chitrisiddiri :) I could imagine what you said in words :)
ReplyDelete