ಅವಳಿಲ್ಲದಿದ್ದರೂ

(ಸಂಜೆ ಹೊತ್ತು ಹೊರಗಡೆ ಬೇಜಾರಿನಿಂದ ಕೂತಿದ್ದೆ, ನೋಡು ನೋಡುತಿದ್ದಂತೆ ಮಳೆರಾಯ ಆಗಮಿಸಿದ... ಮೈಯೆಲ್ಲ ನೀರು ಚಳಿಯಗುತಿತ್ತು ಆಗ ನನಗನ್ನಿಸಿದ್ದು)
ಮತ್ತೆ ಮತ್ತೆ ನೆನೆಯುವಾಸೆ
ಸುರಿಯೊ ತುಂತುರು ಮಳೆಯಲಿ
ಅವಳ ನೆನಪಲಿ ಮಿಂದು ಬಂದ
ಮನಸು ಕೊಂಚ ನೆನೆಯಲಿ
ಹನಿ ಹನಿಗಳಲ್ಲೂ ಅವಳ ಮಾತು
ಕೇಳುತಿಹವು ಕಿವಿಗಳು
ಗೆಜ್ಜೆ ಸದ್ದನು ಬೀರುತಿಹವು
ಎಲೆಯ ಮೇಲೆ ಬಿದ್ದ ಹನಿಗಳು
ನನ್ನ ದೇಹವು ತೋಯುತಿರಲು
ಅವಳ ಅಪ್ಪುಗೆ ಬಯಸಿದೆ
ಕೆನ್ನೆ ಮೇಲಿಹ ತಂಪು ಹನಿಗಳು
ಅವಳು ಇತ್ತ ಮುತ್ತಿನಂತಿದೆ
ಅವಳಿಲ್ಲ ಜೊತೆಯಲ್ಲಿ
ಆದರೂ ಜೊತೆ ಇರುವಂತಿದೆ
ಸುತ್ತಲೂ ಘಾಡ ಮೌನವಿದ್ದರೂ
ಅವಳು ಮಾತನಾಡಿದಂತಿದೆ
Comments