ನಾನು ಸದ್ಯ MCA ಮಾಡುತ್ತಾ ಹಾಸ್ಟೇಲಿನಲ್ಲಿದ್ದೇನೆ. ಸಂಜೆ ಗೆಳೆಯನ ಜೊತೆ ಕೆಲವು ಸಾಮಾನುಗಳನ್ನು ತರಲಿಕ್ಕೆ ಅಂತಾ ಹೊರಗಡೆ ಹೊಗಿದ್ದೆ. ಹಾಸ್ಟೇಲಿಗೆ ವಾಪಾಸ್ ಆಗಬೇಕಾದ್ರೆ ಹಿಂದಿ ಮಾತನಾಡುವ ಹುಡುಗ ಬಂದು "ಭೈಯ ಆಪ್ಕೊ ಹಿಂದಿ ಆತಾಹೆ ಕ್ಯಾ" ಎಂದ ಅದಕ್ಕೆ ಹಾ! ಎಂದೆ.... ಅವನು ಹಿಂದುಗಡೆ ತಾಯಿ ಅಳುತ್ತಿರೊ ಮಗುವನ್ನು ತೋರಿಸಿ "ಭೈಯ್ಯ ಸುಭಾ ಸೇ ಹಮ್ ಬುಕೆ ಹೈ(ಬೆಳಗ್ಗೆಯಿಂದ ಉಪವಾಸವಿದ್ದೀವಿ), ಕುಚ್ ತೊ ಖಾನೆ ಕೇ ಲಿಯೆ ಬೇಜಿಯೆ(ತಿನ್ನೋಕೇನಾದ್ರು ಕೊಡಿಸಿ) " ಅಂತಾ ಕೇಳಿದ, ಒಂದು ಕ್ಷಣ ಮನಸ್ಸು ತಲ್ಲಣವಾಯ್ತು.... ಜೊತೆಗಿದ್ದ ಗೆಳೆಯ "ಲೇ ಇವೆಲ್ಲಾ ಬೆಂಗಳೂರಲ್ಲಿ ಇದ್ದದ್ದೇ ಬಾ.." ಎಂದು ಕೈ ಹಿಡಿದುಕೊಂಡು ಎಳೆದುಕೊಂಡು ಹೋದ.... ರೂಮಿಗೆ ಬಂದೆ, ಊಟಕ್ಕೆ ಸೀಟಿ ಹಾಕಿದರು, ತಟ್ಟೆ ತೊಳೆದು ಊಟಕ್ಕೆ ಕೂತೆ ಅನ್ನ ಗಂಟಲಲ್ಲಿ ಇಳಿಯುವುದಕ್ಕೆ ಇಳಿಯುವುದಕ್ಕೆ ಹೆಣಗಾಡುತಿತ್ತು. ಅಲ್ಪ ಸ್ವಲ್ಪ ಊಟ ಮಾಡಿ ಕೈ ತೊಳೆದುಕೊಳ್ಳೋಕೆ ಹೋದೆ ಅಲ್ಲಿ ಡ್ರಮ್ಮಿನಲ್ಲಿ ಹೆಚ್ಚಾಗಿ ಸುರಿದ ಅನ್ನ ಕಂಡೆ. ರೂಮಿಗೆ ಹೋಗಿ ಮಂಕು ಹಿಡಿದವನಂತೆ ಕೂತೆ ಒಂದು ಕಡೆ ಹಸಿದ ಹೊಟ್ಟೆಗೆ ಅನ್ನವಿಲ್ಲದೆ ಬೇಡುವ ಜನ ಒಂದು ಕಡೆಯಾದರೆ, ಅನ್ನ ಹೆಚ್ಚಾಯಿತೆಂದು ಸುರಿಯವ ಜನರೊಂದು ಕಡೆ. ಕಡೇ ಪಕ್ಷ ಆ ಹುಡುಗನಿಗೆ ಒಂದು ಬಿಸ್ಕತ್ತು ಪ್ಯಾಕೇಟು ಕೊಡಿಸಲಾಗಲಿಲ್ಲಾ ಅನ್ನೋ ಪಾಪ ಪ್ರಜ್ನೆ ಕಾಡತೊಡಗಿತ್ತು, "ಅನ್ನದಾನಕ್ಕಿಂತ ಇನ್ನು ದಾನವ...