ಮುದುಕಿಯ ಲಾಟೀನು ಮತ್ತು ಕತ್ತಲು


ಕಪ್ಪು ಕತ್ತಲು ಹೆಪ್ಪುಗಟ್ಟಿದೆ
ಯಾರೋ ಮೋಹಿನಿಯ ಕಪ್ಪು
ಕೂದಲು ಹರಡಿಕೊಂಡಿರುವಂತೆ
ಬೆಳಕೀಯಲು ಒಂದೇ ಒಂದು
ಚುಕ್ಕಿ ಪತ್ತೆ ಇಲ್ಲ!
ಚಂದಿರನೋ ಭಯಭೀತನಾಗಿ
ಕೆಲಸಕ್ಕೆ ರಜೆ ಹಾಕಿ ಹೋಗಿದ್ದಾನೆ!
ಮರಗಿಡಗಳು ಅಲ್ಲಿಂದ ಕಾಲ್ಕಿತ್ತಲು
ಪ್ರಯತ್ನಿಸುತ್ತಿವೆ,
ಆದರೆ ಬೇರುಗಳು ಬಿಡುತಿಲ್ಲ!
ಓ!! ದೂರದಲ್ಲೆಲ್ಲೋ ಸಣ್ಣಗೆ ಬೆಳಕು
ಕಾಣುತ್ತಿದೆಯಲ್ಲಾ,
ಹೇಗೋ ಬೆಳಕು ಬಂದರೆ ಸಾಕು,
ಬೆಳಕು ಹಿಡಿದು ತಂದವರಾರು...
ಬಾಗಿದ ಬೆನ್ನಿನಾಕೃತಿ
ಹಾಗೊಂದು ಹೀಗೊಂದು
ಸಣ್ಣಗೆ ಹೆಜ್ಜೆ ಹಾಕುತ್ತಿದ್ದ ಅದು
ಮುದುಕಿ........
ಅದು ಹಿಡಿದ ಚಿಕ್ಕ
ಸೀಮೆಎಣ್ಣೆಯ ಲಾಟೀನಿನ ಬೆಳಕಿಗೆ
ಹೆದರಿ ಓಡುತ್ತಿದೆ ಕತ್ತಲು
ಹೆಪುಗಟ್ಟಿದ್ದ ಕಪ್ಪುಗತ್ತಲು

Comments

  1. ಉದ್ದೇಶಪೂರ್ವಕವೋ ಗೊತ್ತಿಲ್ಲ. ಕವಿತೆಯಲ್ಲಿ ಒಂದೆರಡು ವ್ಯಾಕರಣ ದೋಷಗಳು ಉಳಿದು ಹೋಗಿವೆ. ಒಂದೇ ಒಂದು ಚುಕ್ಕಿಗಳು (ಚುಕ್ಕಿ ಎಂದಾಗಬೇಕಿತ್ತಲ್ಲವೇ) ಮತ್ತು ಮರಗಿಡಗಳು ಅಲ್ಲಿಂದ ಕಾಲ್ಕಿತ್ತಲು (ಕಾಲ್ಕೀಳಲು). ಇನ್ನೂ ಅಜ್ಜಿಯನ್ನು ’ಅದು’ ಅಂತನ್ನೋದು ನಿಮಗೆ ಬಿಟ್ಟದ್ದು.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ