ನಲ್ಲೆಗೊಂದು ಪತ್ರ

ಪ್ರಿಯೆ.....
ನಲ್ಲೆ ಹೇಗಿದ್ದೀಯ? ನಾ ಕೊಟ್ಟಿದ್ದ ಹೂ ಹೇಗಿದೆ ಸೌಖ್ಯ ತಾನೆ?
ನಿನ್ನ ಜೋತೆ ಕಳೆದ ಕ್ಷಣಗಳು ಆಗಾಗ ನನ್ನ ಕಣ್ ರೆಪ್ಪೆಯ ಹಿಂದೆ ಬಂದು ಕಾಡುವವು,
ನೀ ನನ್ನೊಂದಿಗೆ ಹಾಕಿದ ಹೆಜ್ಜೆಗಳು ನನ್ನ ಸುತ್ತ-ಮುತ್ತ ಸುಳಿದಾಡುತ್ತಿವೆ ಏನೋ ಎನಿಸುತ್ತಿದೆ
ಪಾರ್ಕಿನಲಿ ನಾವು ಗಂಟೇಗಟ್ಟಲೆ ಹರಟಿದ್ದು, ಅಲ್ಲೇ ಮಾರುತ್ತಾ ಹೊರಟಿದ್ದ ಚಿಪ್ಸ್ ಗಳನ್ನು ತಗೊಂಡೆ ಆದರೆ
ಪರ್ಸು ರೂಮಿನಲ್ಲೆ ಮರೆತಿದ್ದೆ, ದುಡ್ಡು ನೀನೆ ಕೊಟ್ಟೆಯಲ್ಲಾ.........
ಒಂದೊಮ್ಮೆ ಸುಮಾರು ಏಳೆಂಟು ಕಿಲೋಮೀಟರ್ ನಡೆದೆವು ನೆನಪಿದೆಯ, ಹೇಗೆ ತಾನೆ ಮರಿತೀಯ ಬಿಡು.
ಉಸ್ಸಪ್ಪಾ! ಅಂತಾ ನಡೇಯೊಕಾಗದೆ ಅಲ್ಲಲ್ಲಿ ಕೂತದ್ದು ಎಲ್ಲವೂ ಹಚ್ಚ ಹಸಿರು.... ನೀನು ಐಸ್ ಕ್ರೀಮು ಕೊಡ್ಸು ಅಂತ
ಕೇಳಿದಾಗ ನಾನು ಕೊಡಿಸದೆ ಸತಾಯಿಸಿದ್ದು, ಕೋಪ ಬಂದು ಮೌನ ಗೌರಿಯಾಗಿದ್ದು. ನಗೆ ಬಂದು ಹೋಗುತ್ತದೆ...
ನೀನು ಅಪ್ಪಿ ಕೆನ್ನೆಗಿಟ್ಟ ಮುತ್ತು ಇನ್ನು ನನ್ನಲ್ಲೇ ಜೋಪಾನವಾಗಿದೆ, ನಿನ್ನ ಮುಂಗುರಳ ನೇವರಿಸಿದ ನನ್ನ ಬೇರಳುಗಳು
ಹಾಗೆ ಖುಷಿಯಾಗಿವೆ...................
ನಿನ್ನ ನೆನಪುಗಳಲ್ಲೆ ಕಾಲ ಕಳೆಯುತಲಿರುವೆ, ನಿನ್ನ ದಾರಿಯಲಿ ಹಚ್ಚಿಟ್ಟ ಮೇಣದ ಬತ್ತಿ ಕರಗುವ ಮುನ್ನ ಬಾ ಗೆಳತಿ....
ಇಂತಿ ನಿನ್ನವ
ಪ್ರವರ
ಕವಿತೆಗಳು ಬಹಳ ನವಿರಾಗಿದ್ದು ಮನಸ್ಸಿಗೆ ಮುದ ಕೊಟ್ಟವು. ಎಲ್ಲೋ ನನ್ನದೇ ಭಾವನೆಗಳಿಗೆ ಮಾತು ಬಂದಂತೆ ಅನ್ನಿಸಿತು. ಈ ಪದಸಿರಿ ಜಾರಿಯಲ್ಲಿರಲಿ.
ReplyDelete