ಬಾನುವಾರದ ಸಂಜೆಯಲಿ....

ಬಾನುವಾರದ ಸಂಜೆಯಲಿ
ನಾನು ನನ್ನವಳು ಹಾಗೆ ಹೆಜ್ಜೆ
ಹಾಕುತ್ತಾ ಹೊರಟಿದ್ದೆವು
ಎಲ್ಲಿಗೆಂದು ನನಗೂ ಗೊತ್ತಿಲ್ಲಾ!
ಅಲ್ಲೊಂದು ಇಲ್ಲೊಂದು
ಹಕ್ಕಿಗಳ ಪಿಚಿ-ಪಿಚಿ ಸದ್ದು
ಬಿಟ್ಟರೆ ನಮ್ಮ ಉಸಿರಾಟದ ಸದ್ದು
ಆಗಾಗ ಜೋರಾಗುತಲಿದ್ದ
ಎದೆ ಬಡಿತದ ಸದ್ದು.....
ಏಕೋ ಮೌನವೇ ನಮ್ಮಿಬ್ಬರನು
ದೂರ ನಡೆಸುತಲಿತ್ತು
ಅವಳು ಕೈ ಕಟ್ಟಿ ನೆಲವನ್ನೇ
ನೋಡುತ್ತಾ ನಡೆಯುತ್ತಿದ್ದರೆ,
ನಾನು ಅಕ್ಕ ಪಕ್ಕದ ಮರಗಳ
ಎಲೆಗಳ ಹಿಡಿಯಲೆತ್ನಿಸುತಿದ್ದೆ...
ತಣ್ಣನೆಯ ಗಾಳಿ ನಮ್ಮೊಡನೆ
ಸಂಚರಿಸುತಿತ್ತು...
ನನ್ನವಳು ಮುಡಿಯಲ್ಲಿ ಮುಡಿದಿದ್ದ
ಹೂವಿನ ಪರಿಮಳವ
ಹಿಡಿಯಲು ಹೊಂಚು ಹಾಕಿತ್ತೋ ಏನೊ...
ಹಿಂತಿರುಗಿ ನೋಡಿದೆ
ನಾವು ನಡೆದ ಹಾದಿ
ನಮ್ಮನ್ನೇ ಎದುರು ನೋಡುತಲಿತ್ತು.....
Comments
Post a Comment
ಅನ್ಸಿದ್ ಬರೀರಿ