ನಗು ತುಟಿಗೆ, ಸಿಟ್ಟು ಮೂಗಿಗೆ

ಎಷ್ಟೋ ಸಾರಿ ಅವಳೊಂದಿಗೆ
ಜಗಳವಾಡುತ್ತೇನೆ ಅದೂ ಕಾರಣವಿಲ್ಲದೆ
ಮುನಿಸುಗುಟ್ಟಿದ ಮುಖದಲ್ಲಿ ನಗುವುಳ್ಳ ಸಿಟ್ಟು
ನಗು ತುಟಿಯ ತುದಿಗಾದರೆ,
ಸಿಟ್ಟು ಮೂಗಿನ ತುದಿದೆ,
ಎಷ್ಟೋ ಸಾರಿ ಮೂಗಿನ ತುದಿಯನ್ನು
ಬೆರಳಿಂದ ಕೊಡವಿದ್ದೇನೆ, ಆದರೂ
ಸಿಟ್ಟು ಹಾಗೆ ಅಂಟಿಕೊಂಡಿದೆ,
ಕೊಟ್ಟ ಹೂವಿನ ದಳಗಳ
ಕಿತ್ತೊಸೆದು ಸಿಡುಕುವಳು....
ಗಂಟೆಗಟ್ಟಲೆ ಮೌನ, ನಾನೆಷ್ಟೇ
ಮಾತನಾಡಿಸಿದರೂ ಮೌನದ ಪ್ರತಿಭಟನೆ
ಚಿನ್ನ-ರನ್ನವೆಂದರೂ ಉಪಯೋಗವಿಲ್ಲ,
ಹಾಡಿದರೆ ಕಿವಿ ಮುಚ್ಚಿಕೊಂಡು ದೂರ ಹೋಗುವಳು
ಕೊನೆಗೆ ಗಟ್ಟಿಯಾಗಿ ಅಪ್ಪಿ ಮುತ್ತಿಟ್ಟರೆ,
ನನ್ನ ಜೋರಾಗಿ ದೂಡಿ ನಕ್ಕು ಬಿಡುವಳು ಹಾಗೆ
ನಾ ನನ್ನ ಮರೆಯುವಂತೆ....
ಅದ್ಭುತವಾಗಿವೆ ಸಾಲುಗಳು..
ReplyDeleteThis comment has been removed by the author.
ReplyDeletePravara very very nice lines....
ReplyDeletei felt very happy to read those.
Thanks for writing these lines....