ಸಿಡುಕುತಿದ್ದಾನೆ ಕಾಲ

ಉರುಳುತಿಹವು ದಿನಗಳು
ಒಂದರ ಹಿಂದೊಂದರಂತೆ
ಹಳೆಯ ತಲೆಗಳೆಲ್ಲಾ
ಭೂಮಿಯೊಡಲ ಸೇರುತಿಹವು,
ಹೊಸತುಗಳೆಲ್ಲಾ ಒಡಲಿಂದ
ಸೇರುತಿಹವು ತಮ್ಮ ತಾಯಿ
ಮಡಿಲಿಗೆ ಅಳುತ್ತಾ.
ಮರದ ಬೇರುಗಳೆಲ್ಲಾ
ಆಳ ಸೇರುತಿಹವು
ಯಾರೀಗೂ ಕಾಣದಂತೆ,
ರೆಂಬೆ ಕೊಂಬೆಗಳೆಲ್ಲಾ
ಒಂದಿಷ್ಟು ದಿನ ಹಸಿರಾಗಿ,
ಇನ್ನೋಂದಿಷ್ಟು ದಿನ ಒಣಗಿ
ಈಗ-ಈಗೀಗ ಸೊರಗುತಿವೆ
ಕಾಲನ ಓಟಕ್ಕೆ ಮರುಗಿ.
ಮೋಡಗಳ ಹೊಡೆದಾಟಕ್ಕೆ
ಉದುರಿದ ಮಳೆ ಹನಿಗಳು
ಓಡೋಡಿ ಬಂದು ತಬ್ಬುತಿವೆ
ಸುಂದರಿ ವಸುಂಧರಿಯ
ಜಾಗತೀಕರಣದ ಹೋಡೆತಕ್ಕೆ
ಬದಲಾಗುತ್ತಿದ್ದಾನೆ ಕಾಲ
ತನ್ನ ನಿಜ ಸ್ವರೂಪ ತೋರಿಸಲಿದ್ದಾನೆ,
Comments
Post a Comment
ಅನ್ಸಿದ್ ಬರೀರಿ