ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, April 10, 2010

ನನ್ನಪ್ಪ
ನಾನು ಹುಟ್ಟಿದೊಡನೆ
ಮೊದಲು ಖುಷಿಯ ಪಟ್ಟವನು
ನನ್ನಪ್ಪ.....
ಅಮ್ಮನಿಗಿಂತ ಮೊದಲು
ಮುತ್ತು ಕೊಟ್ಟವ,
ನನಗೆ ನಡಿಗೆಯ
ಕಲಿಸಲು ಮೊದಲ
ಗುರುವಾದಾತ...
ನನ್ನ ರಾಜನ ಮಾಡುವ
ಸಲುವಾಗಿ ತಾನು
ಆನೆಯಾದಾತ,
ನನ್ನ ಜೀವದಾತ......
ಗುಂಗುರು ಕೂದಲುಗಳು
ಕಣ್ಣುಗಳ ಸೋಕಿ
ರೆಪ್ಪೆಗಳು ಮುಚ್ಚುವಾಗ
ಉಫ್ ಎಂದು ಉರುವಿ
ತಂಗಾಳಿಯ ಬೀಸಿದಾತ....
ಅಮ್ಮ ಅಡುಗೆ
ಮಾಡುವಾಗ ತನ್ನ ಕಾಲ್ಗಳ
ಮೇಲೆ ನನ್ನ ಕಾಲ್ಗಳನಿರಿಸಿ
ಆಟವಾಡಿಸಿದಾತ...
ಅಮ್ಮ ಮೊದಲ ಗುರುವಾದರೆ
ಅಪ್ಪ ಮೊದಲ ಸ್ನೇಹಿತ....

3 comments:

  1. simply superb....amazing papa. my email id is roopak.manjunath@gmail.com

    ReplyDelete
  2. very nice tande bagge thumba olle abhipraya kottidira...

    ReplyDelete

ಅನ್ಸಿದ್ ಬರೀರಿ