ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Tuesday, April 6, 2010

ನನ್ನ ಪ್ರೇಮದ ಪರಿಯ ನೀನರಿಯೆ ಕನಕಾಂಗಿ...


ಚಂದ್ರನ ಬೆಳದಿಂಗಳೇ ಅವಳ ಮೈಯ ಬಣ್ಣವಾಗಿತ್ತೋ ಏನೋ!!!! ಮೊಗದ ಮೇಲಿನ ನಗುವು ಹೂವನ್ನೂ ನಾಚಿಸುವಷ್ಟು ಸುಂದರವಾಗಿತ್ತು, ಆಹ್ಹಾ! ಆ ಕಂಗಳಲ್ಲಿ ನಕ್ಷತ್ರಗಳ ಸಮೂಹವೇ ಇತ್ತೇನೋ, ಯಾರೇ ಅವಳ ನೋಡಿದರೂ ಪ್ರೇಮದ ಬಂದೀಖಾನೆಗೆ ಬೀಳದೇ ಇರರು, ಅಷ್ಟು ಸೌಂದರ್ಯವತಿ ನನ್ನ ಮನದರಸಿ......

ಅವಳು ಎದುರುಗಡೆ ಬಂದೊಡನೆ ನನ್ನ ಕಣ್ ರೆಪ್ಪೆಗಳು ಮುಚ್ಚಲು ಒಲ್ಲೆ ಎನ್ನುತಿದ್ದವು, ಹೃದಯ ಬಡಿತದ ಸದ್ದು ಪಕ್ಕದವರಿಗೂ ಕೇಳುವಷ್ಟು ಜೋರಾಗುತಿತ್ತು, ಮನದ ಮುಗಿಲಿನಲ್ಲಿ ಬಣ್ಣ-ಬಣ್ಣದ ಕನಸುಗಳು ಹಗಲು ಹೊತ್ತಿನಲ್ಲೇ ಬೀಳತೊಡಗಿದವು.....
ಮನಸ್ಸು, ಹೃದಗಳೆರಡು ಅವಳ ಸೌಂದರ್ಯಕೆ ತಲೆ ಬಾಗಿ ಪ್ರೇಮಲೋಕದಲ್ಲಿ ವಿಹರಿಸತೊಡಗಿದವು. ಅವಳ ಹಿಂದೆ ಹೋಗಿ ಮಾತನಾಡಿಸಲು ಪ್ರಯತ್ನ ಪಟ್ಟೆ, ಧರ್ಯ ಕೊಂಚ ಕಮ್ಮಿ ಎನಿಸಿತು. ಹತ್ತಿರದವರೆಗೂ ಹೋಗಿ ಇನ್ನೇನು ಮಾತನಾಡಿಸ ಬೇಕು ಎನ್ನುವ ಹೊತ್ತಿಗೆ, ಉಸಿರು ಹಿಡಿದಂತಾಗಿ ಸುಮ್ಮನೆ ಹಿಂತಿರುಗಿ ಬಂದೆ.ಅವಳ ಹಿಂದೆ ಅಲೆಯುವಾಗ ಬಿರು ಬಿಸಿಲು ತಂಪೆರೆಯುತಿತ್ತು.
ಕೊನೆಗೊಂದು ದಿವಸ ಮನಸ್ಸಿನ ಆಸೆಯನ್ನೆಲ್ಲಾ ಹೇಳಿಬಿಡೋಣವೆಂದು ಮೊಂಡು ಧೈರ್ಯ ಮಾಡಿ ಹೇಳಿದೆ....."ಹಾಯ್! ಹೇಗಿದಿರಿ.... ನಾನು ಪ್ರವರ ಅಂತ, ಡಿಗ್ರಿ ಮುಗಿತಿದೆ, ನೀವು ತುಂಬಾ ಇಷ್ಟ ಆಗಿದಿರ, pressure ಇಲ್ಲ. time ತಗೊಂಡ್ ಹೇಳಿ,,, next meet ನಲ್ಲಿ ತಿಳಿಸಿ, ಬರ್ತಿನಿ"... ಅವಳು ಸುಮ್ಮನೆ ಮುಗುಳು ನಗುತ್ತಾ ನನ್ನ ಮಾತುಗಳನ್ನ ಕೇಳುತಿದ್ದಳು.
ಅವಳು ತಿರುಗಿ ಬಯ್ಯಲಿಲ್ಲವಲ್ಲಾ ಎಂಬ ಖುಷಿಯಿಂದ ಮನೆಗೆ ಹೊರಟೆ, ರಾತ್ರಿ ತಲೆಗೆ ಕೈ ಕೊಟ್ಟು ಗೋಡೆಗೆ ಒರಗಿ ಮಲಗಿದಾಗ, ಒಪ್ಪುವಳೋ ಇಲ್ಲವೋ ಎಂಬ ಯೋಚನೆ ತಲೆಯಲ್ಲಿ ಕೊರೆಯುತಿತ್ತು. ನಿದ್ರಾದೇವತೆಯ ಆಕ್ರಮಣದಿಂದ ಮಲಗಿದೆ..
ಅವಳು ಸೈಕಲ್ ಹತ್ತಿ ಹೊರಟಾಗ ನಾನು ಎದುರಿಗೆ ಬಂದು, "hello ಹೇಳಿದ್ದು ಏನ್ ಮಾಡಿದ್ರಿ"... ಅದಕ್ಕವಳು "sorry" ಅಂತ ಹೇಳಿದ್ದೆ ಹೊರಟಳು.................
ಕಾರಣಕ್ಕಾಗಿ ಕಾದಿರುವೆ ಅವಳ ಬರುವಿಕೆಗೆ

2 comments:

  1. oh god. . . . who is that yaar . . . .??????????????

    ReplyDelete

ಅನ್ಸಿದ್ ಬರೀರಿ