ಕಳುಹಿಸಿಕೊಡುವೆ ಕವನಗಳಾಗಿ

ನನ್ನೊಳಗಿನ ಕನಸುಗಳು
ರೆಕ್ಕೆ ಬಿಚ್ಚಿ ಹಾರಲಾರವು,
ಕಳುಹಿಸಿಕೊಡುವೆ ಕವನಗಳಾಗಿ
ಮತ್ತೆ ಮರಳಿ ಬರಲಾರವು
ಕಣ್ಣೊಳಗಿನ ಮುನಿಸುಗಳು
ಬರಲಾರವು ಹೊರಗೆ ಹಾಗೆ
ಕಣ್ಣಹನಿಗಳಾಗಿ ಕಳುಹಿಸಿಕೊಡುವೆ
ಆವಿಯಾಗಿ ಬರಲಾರವು ಧರೆಗೆ
ನೆನಪುಗಳಾಗಿ ಇವೆ ಕೆಲವು
ಚಿತ್ರಗಳು ಎದೆಯೊಳಗೆ
ಹರಿಯುತಿವೆ ಇನ್ನೂ ಕೆಲವು
ಸರಾಗವಾಗಿ ರಕುತದೊಳಗೆ
ಹೃದಯದ ಬಡಿತದಲ್ಲಿ ಕೆಲವು
ಸದ್ದು ಮಾಡುತ್ತಿವೆ ಸುಮ್ಮನೆ
ನೋವು-ನೆನಪುಗಳೆಂದರೆ
ಹೀಗೆಯೇ ಏನೋ ಕಾಡುವವು ನಮ್ಮನೆ
nimma kavandalli bellary bisila begeyide
ReplyDelete