ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, March 14, 2010

ಪರೀಕ್ಷೆಯೇ


ಸಾಕು ಸಾಕಾಗಿದೆ ಹೋಗು
ನನಗೆ ಜೀವನ...
ಯಾಕೆಂದು ಕೇಳುವುದಾದರೆ
ಪರೀಕ್ಷೆಯೇ ಕಾರಣ...

ಓದುತ್ತಾ ಕುಳಿತರೆ
ತೂಕಡಿಕೆ ಬರುವುದು
ತೂಕಡಿಕೆ ಎಂದು ಮಲಗಿದರೆ
ಹೆದರಿಕೆ ಯಾಗುವುದು

ಕ್ರಿಕೆಟ್ ಆಡೋನವೆಂದರೆ
ಪರೀಕ್ಷೆ ಗುಮ್ಮನ ಚಿಂತೆ
ಸಾಕಾಗಿ ಹೋಗಿದೆ ಸ್ವಾಮಿ
ತಲೆಯಲ್ಲಿ ಪ್ರಶ್ನೆಗಳ ಸಂತೆ

ಪ್ರಶ್ನೆ ಪತ್ರಿಕೆಯಂದು ಕೊಡುವರು
ಬರಿ ಪ್ರಶ್ನೆಗಳೇ ?
ಮೋಸ ಗೆಳೆಯರೇ ಉತ್ತರ
ಪತ್ರಿಕೆಯಲ್ಲಿ ಉತ್ತರಗಳಿಲ್ಲ

No comments:

Post a Comment

ಅನ್ಸಿದ್ ಬರೀರಿ