ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, March 14, 2010

ಧರ್ಮವೆಂಬ ಸಮರ


ಧರ್ಮ ಧರ್ಮದಿ ಸಮರ ನಡೆದು
ಮುಗುದ ಜನಗಳ ಜೀವ ಕಳೆದು
ಮಾನವೀಯತೆ ಇಲ್ಲವೆಂದು
ತಿಳಿದು ಬೇಸರವಾಗಿದೆ

ನನ್ನ ಜಾತಿ ನನ್ನ ಮತವು
ಎಂಬ ಸ್ವಾರ್ಥದಿ ಮಾನವ
ನಮ್ಮ್ ನಾಡು ನಮ್ಮ ದೇಶ
ಎಂಬುದನ್ನೇ ಮರೆತಿಹ

ಬಾಂಬು ಗನ್ನುಗಳನ್ನು ಹಿಡಿದು
ಧರ್ಮ ರಕ್ಷಿಸುವೆಂದು ಹೊರಟು
ಶಾಂತಿಯನ್ನೇ ಕೊಂಡು ಬಂದು
ನಾನೇ ಧೀರ ಎನುತಿಹ

ತನ್ನ ತಾಯಿಯ ಹೊಟ್ಟೆಯನ್ನು
ಕ್ರೂರ ತನದಿ ಅಗೆದು-ಬಗೆದು
ಕರುಳ ಹಿಂದಿ ನೋವ ಕೊಟ್ಟು
ದುಷ್ಟ ನಗುವ ನಗುತಿಹ

ಯಾವುದಯ್ಯ ನಿನ್ನ ಕುಲವು
ಯಾವುದಯ್ಯ ನಿನ್ನ ಮತವು
ಭಾರತಾಂಬೆಯು ನಮ್ಮ ತಾಯಿಯು
ನಾವು ಅವಳ ಮಕ್ಕಳು............

No comments:

Post a Comment

ಅನ್ಸಿದ್ ಬರೀರಿ